ಹಾವು ಹಿಡಿಯಲು ಹೋಗಿದ್ದ ವ್ಯಕ್ತಿಯನ್ನು 5ಕ್ಕೂ ಅಧಿಕ ಬಾರಿ ಕಚ್ಚಿ ಕೊಂದ ಹಾವು! - Mahanayaka

ಹಾವು ಹಿಡಿಯಲು ಹೋಗಿದ್ದ ವ್ಯಕ್ತಿಯನ್ನು 5ಕ್ಕೂ ಅಧಿಕ ಬಾರಿ ಕಚ್ಚಿ ಕೊಂದ ಹಾವು!

snek
28/11/2021

ಯಾದಗಿರಿ: ಹಾವನ್ನು ಹಿಡಿದು ಜನರಿಲ್ಲದ ಪ್ರದೇಶದಲ್ಲಿ ಬಿಡಲು ಹೋಗುತ್ತಿದ್ದ  ವ್ಯಕ್ತಿಯೊಬ್ಬರಿಗೆ 5 ಕ್ಕೂ ಅಧಿಕ ಬಾರಿ ಹಾವು ಕಚ್ಚಿದ್ದು, ಪರಿಣಾಮವಾಗಿ ಅವರು ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾದ ಗುಡಿಹಾಳ ಗ್ರಾಮದಲ್ಲಿ ನಡೆದಿದೆ.

65 ವರ್ಷ ವಯಸ್ಸಿನ ಬಸವರಾಜ ಪೂಜಾರಿ ಮೃತಪಟ್ಟವರಾಗಿದ್ದು, ಇವರು ತಮ್ಮ ಊರಿನಲ್ಲಿ ಸುಮಾರು 300ಕ್ಕೂ ಅಧಿಕ ಹಾವುಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟು ರಕ್ಷಿಸಿದ್ದರು. ಶನಿವಾರ ಗ್ರಾಮದಲ್ಲಿ ಕಾಣಿಸಿಕೊಂಡ ಹಾವನ್ನು ಹಿಡಿದುಕೊಂಡು ಸುರಕ್ಷಿತ ಸ್ಥಳಕ್ಕೆ ಅವರು ತೆರಳುತ್ತಿದ್ದರು ಎಂದು ತಿಳಿದು ಬಂದಿದೆ.

ಹಾವನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದ ವೇಳೆ, ಏಕಾಏಕಿ ಹಾವು ಕಚ್ಚಿದೆ. ಆದರೆ ಹಾವು ಕಚ್ಚಿದರೂ ವಿಚಲಿತರಾಗದ ಅವರು ಹಾವನ್ನು ಬಿಡದೇ ಕೈಯಲ್ಲಿ ಹಿಡಿದುಕೊಂಡು ಮುಂದೆ ನಡೆದಿದ್ದಾರೆ. ಆದರೆ ಹಾವು ಪದೇ ಪದೇ ಕಚ್ಚಿದ್ದು, 5ಕ್ಕೂ ಅಧಿಕ ಬಾರಿ ಹಾವು ಕಚ್ಚಿದರೂ ಹಾವನ್ನು ಬಿಡಲಿಲ್ಲ. ಹಾವನ್ನು ಹಿಡಿದುಕೊಂಡೇ ಕುಸಿದು ಅವರು ಮೃತಪಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮುಂದಿನ ಸರಿಗಮಪ ವೇದಿಕೆಯಲ್ಲಿ ಹಂಸಲೇಖ ಇಲ್ಲದಿದ್ದರೆ, ‘ಝೀ ಕನ್ನಡ’ಕ್ಕೆ ಆಗಲಿದೆ ಭಾರೀ ನಷ್ಟ!

ABCD ಗೊತ್ತಿಲ್ಲದ ಇಬ್ಬರು ಇಂಗ್ಲಿಷ್ ಶಿಕ್ಷಕರ ಅಮಾನತು

ಶಿಕ್ಷಣ, ಆರೋಗ್ಯ, ಉದ್ಯೋಗದ ಹಕ್ಕಿಗಾಗಿ ಪ್ರಬಲ ಜನಚಳುವಳಿ ಕಟ್ಟಲು ಸಿಪಿಐ(ಎಂ) ಜಿಲ್ಲಾ ಸಮ್ಮೇಳನ ನಿರ್ಧಾರ

ರಂಗಭೂಮಿಯನ್ನೂ ಬೆನ್ನತ್ತಿದ ಕೋಮುವಾದದ ಸರಕು

ತಮ್ಮ ನೇಣು ಬಿಗಿದುಕೊಂಡಿದ್ದ ಸೀರೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಅಕ್ಕಾ!

ಡಿಜೆ ಸೌಂಡ್ ಗೆ ಹೃದಯಾಘಾತಗೊಂಡು 63 ಕೋಳಿಗಳ ಸಾವು

ಶಾಸಕರಿಗೇ ಅಸ್ಪೃಶ್ಯತೆ ಅನುಭವವಾಯ್ತಾ? | ಪಲ್ಲಕ್ಕಿ ಹೊತ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೆಟ್ಟ ಅನುಭವ!

ಇತ್ತೀಚಿನ ಸುದ್ದಿ