ವರದಕ್ಷಿಣೆ ಕೊಡಲಿಲ್ಲ ಎಂದು ಕೊಂದೇ ಬಿಟ್ಟರು: ಸಾವಿಗೂ ಮೊದಲು ಸಹೋದರನಿಗೆ ಕರೆ ಮಾಡಿದ ಮಹಿಳೆ! - Mahanayaka
5:00 PM Wednesday 20 - August 2025

ವರದಕ್ಷಿಣೆ ಕೊಡಲಿಲ್ಲ ಎಂದು ಕೊಂದೇ ಬಿಟ್ಟರು: ಸಾವಿಗೂ ಮೊದಲು ಸಹೋದರನಿಗೆ ಕರೆ ಮಾಡಿದ ಮಹಿಳೆ!

noida
02/04/2024


Provided by

ನೋಯ್ಡಾ: ಟೊಯೋಟಾ ಫಾರ್ಚುನರ್ ಹಾಗೂ 21 ಲಕ್ಷ ನಗದು ವರದಕ್ಷಿಣೆ ಬೇಡಿಕೆ ಈಡೇರಿಸದ ಕಾರಣ ಮಹಿಳೆಯನ್ನು ಪತಿ ಹಾಗೂ ಆತನ ಕುಟುಂಬಸ್ಥರು ಸೇರಿ ಹೊಡೆದುಕೊಂದಿರುವ ಘಟನೆ ನೋಯ್ಡಾದ ಇಕೋಟೆಕ್ -3 ನ ಖೇಡಾ ಚೌಗನ್ಪುರ ಗ್ರಾಮದಲ್ಲಿ ನಡೆದಿದೆ.

ಕರಿಷ್ಮಾ ಮೃತ ಮಹಿಳೆಯಾಗಿದ್ದಾರೆ. ಮೃತ ಮಹಿಳೆ ತನ್ನ ಪತಿ ವಿಕಾಸ್ ಹಾಗೂ ಅತ್ತೆಯೊಂದಿಗೆ ವಾಸಿಸುತ್ತಿದ್ದರು. ದಂಪತಿಗಳು ಡಿಸೆಂಬರ್ 2022 ರಲ್ಲಿ ವಿವಾಹವಾದರು. ಮದುವೆಯ ವೇಳೆ ವರನ ಕುಟುಂಬಕ್ಕೆ ಎಸ್ ಯು ವಿ ಕಾರು ಮತ್ತು 1 ಲಕ್ಷ ರೂಪಾಯಿ ಮೌಲ್ಯದ ಚಿನ್ನವನ್ನು ವರದಕ್ಷಿಣೆಯಾಗಿ ನೀಡಿದ್ದರು.

ಆದರೂ ತೃಪ್ತನಾಗದ ವಿಕಾಸ್ ಕುಟುಂಬವು ಹಲವು ವರ್ಷಗಳಿಂದ ಹೆಚ್ಚಿನ ವರದಕ್ಷಿಣೆಗಾಗಿ ಕರಿಷ್ಮಾ ಮೇಲೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಲ್ಲೆ ನಡೆಸುತ್ತಿದ್ದರು ಎಂದು ಕರಿಷ್ಮಾಳ ಸಹೋದರ ಆರೋಪಿಸಿದ್ದಾರೆ.

ಮಹಿಳೆಯ ಸಹೋದರ ದೀಪಕ್ ನೀಡಿದ ಮಾಹಿತಿಯ ಪ್ರಕಾರ, ಶುಕ್ರವಾರ ಕರಿಷ್ಮಾ ತನ್ನ ಸಹೋದರನಿಗೆ ಕರೆ ಮಾಡಿ ತನ್ನ ಪತಿ ಹಾಗೂ ಆತನ ಕುಟುಂಬಸ್ಥರು ತನಗೆ ಥಳಿಸಿದ್ದಾರೆ ಎಂದು ತಿಳಿಸಿದ್ದಾಳೆ. ಈ ಮಾಹಿತಿ ಮೇರೆಗೆ ಆಕೆಯ ಮನೆಯವರು ಪತಿ ಮನೆಗೆ ಆಗಮಿಸಿ ಪರಿಶೀಲಿಸಿದಾಗ ಆಕೆ ಮೃತಪಟ್ಟಿದ್ದರು ಎನ್ನಲಾಗಿದೆ.

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪತಿ ವಿಕಾಸ್ ಮತ್ತು ಆತನ ತಂದೆ ಸೋಂಪಾಲ್ ಭಾಟಿಯನ್ನು ಬಂಧಿಸಿದ್ದಾರೆ. ಅಲ್ಲದೇ ಆತನ ತಾಯಿ ರಾಕೇಶ್, ಸಹೋದರಿ ರಿಂಕಿ ಮತ್ತು ಸಹೋದರರಾದ ಸುನೀಲ್ ಮತ್ತು ಅನಿಲ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ