ಚಾಕ್ಲೇಟ್, ಆಟಿಕೆ ಕೇಳಿದ್ದಕ್ಕೆ 8 ವರ್ಷದ ಮಗಳನ್ನೇ ಕೊಂದ ಮಾದಕ ವ್ಯಸನಿ! - Mahanayaka

ಚಾಕ್ಲೇಟ್, ಆಟಿಕೆ ಕೇಳಿದ್ದಕ್ಕೆ 8 ವರ್ಷದ ಮಗಳನ್ನೇ ಕೊಂದ ಮಾದಕ ವ್ಯಸನಿ!

arrest
06/06/2023


Provided by

ಇಂದೋರ್:‌ ಮಾದಕ ವ್ಯಸನಿ ತಂದೆಯೋರ್ವ ತನ್ನ 8 ವರ್ಷದ ಮಗಳು ಚಾಕ್ಲೆಟ್, ಆಟಿಕೆ ಕೇಳಿದಳು ಎಂದು ಬರ್ಬರವಾಗಿ ಹತ್ಯೆ ಮಾಡಿರುವ ಅಮಾನವೀಯ ಘಟನೆ ಮಧ್ಯ ಪ್ರದೇಶದ ಇಂದೋರ್‌ ನಲ್ಲಿ ನಡೆದಿದೆ.

ಆರೋಪಿಯ ಪತ್ನಿ ಮೂರು ವರ್ಷಗಳ ಹಿಂದೆ ಆತನನ್ನು ಬಿಟ್ಟು ಹೋಗಿದ್ದಳು. ಆತನ ತಾಯಿ ದೇವಸ್ಥಾನವೊಂದರಲ್ಲಿ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದಳು. ಅತ್ತ ತಾಯಿ ಇಲ್ಲ, ಇತ್ತ ಇರುವ ತಂದೆ ಮಾದಕ ವ್ಯಸನಿಯಾಗಿದ್ದ. ಎಲ್ಲ ಮಕ್ಕಳಂತೆಯೇ ಚಾಕ್ಲೆಟ್, ಆಟಿಕೆಗಳಿಗೆ 8 ವರ್ಷದ ಬಾಲಕಿ ಆಸೆಪಡುತ್ತಿದ್ದಳು. ಇದರಿಂದ ಕೋಪಗೊಂಡ ತಂದೆ ಶನಿವಾರ ರಾತ್ರಿ ನಿರ್ಮಾಣ ಹಂತದ ಕಟ್ಟಡದ ಬಳಿ ಕರೆದುಕೊಂಡು ಹೋಗಿ ಕಲ್ಲುಗಳಿಂದ ತಲೆ ಮೇಲೆ ಹಲ್ಲೆಗೈದು ಆಕೆಯನ್ನು ಕೊಲೆಗೈದಿದ್ದಾನೆ.

ಇನ್ನೂ ಆರೋಪಿಯ ಬಳಿ ಮತದಾರರ ಚೀಟಿವೊಂದು ಬಿಟ್ಟರೆ ಬೇರಾವುದೇ ದಾಖಲೆಗಳು ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಚಾಕ್ಲೆಟ್, ಆಟಿಕೆ ಕೇಳಿದ್ದಕ್ಕೆ 8 ವರ್ಷದ ಬಾಲಕಿಯ ಹತ್ಯೆಯಾಗಿರುವುದು ಪ್ರಜ್ಞಾವಂತ ನಾಗರಿಕರ ಕರುಳು ಹಿಂಡಿದೆ. ಮಾದಕ ವ್ಯಸನಿಗಳಿಗೆ ಸಂಸಾರ ಯಾಕೆ, ಹೆಂಡ್ತಿ ಮಕ್ಕಳು ಯಾಕೆ? ಆತನಿಂದ ಬಾಲಕಿಯನ್ನು ಸಾಕಲು ಸಾಧ್ಯವಾಗದಿದ್ದರೆ, ಯಾವುದಾದ್ರೂ ಆಶ್ರಮಕ್ಕಾದ್ರೂ ಸೇರಿಸ ಬಾರದಿತ್ತೇ? ಅನ್ನೋ ಬೇಸರದ ಮಾತುಗಳು ಘಟನೆಯ ಬೆನ್ನಲ್ಲೇ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ