ಅವನಿಗೆ ಬೆದರಿಕೆ ಕರೆ ಬರ್ತಿತ್ತು: ರೌಡಿಶೀಟರ್ ಸುಹಾಸ್ ಹತ್ಯೆ ಬಗ್ಗೆ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ

ಚಿಕ್ಕಮಗಳೂರು: ವಾಹನ ಅಡ್ಡಗಟ್ಟಿ, ಲಾಕ್ ಮಾಡಿ ವ್ಯವಸ್ಥಿತ ಪಿತೂರಿಯಲ್ಲಿ ಕೊಲೆ ಮಾಡಿದ್ದಾರೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಯಾವ ಮಟ್ಟದಲ್ಲಿ ಇದೆ ಎಂದು ಗೊತ್ತಾಗುತ್ತೆ ಎಂದು ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಹೇಳಿಕೆ ನೀಡಿದ್ದಾರೆ.
ಅವನಿಗೆ ಬೆದರಿಕೆ ಕರೆ ಬರ್ತಿತ್ತು, ಪೊಲೀಸರು ಜಾಗೃತಿ ವಹಿಸಿದ್ರೆ ಈ ಘಟನೆ ತಡೆಯಬಹುದಿತ್ತು. ರಾಜ್ಯದಲ್ಲಿ ಪೊಲೀಸರ ನಡೆ ಅತ್ಯಂತ ಖಂಡನೀಯವಾದದ್ದು ಎಂದು ಕೋಟಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕೂಡ ನಿರ್ದಾಕ್ಷ್ಯ ಕ್ರಮ ಕೈಗೊಳ್ಳೋ ಮಟ್ಟಕ್ಕೆ ಬಂದಿದೆ. ಸುಹಾಸ್ ಸಾವಿಗೆ ನ್ಯಾಯ ಸಿಗೋವರೆಗೂ ಹೋರಾಟ ಮಾಡ್ತೀವಿ, ಎಲ್ಲರೂ ಜಾಗೃತವಾಗಿರುವಂತೆ ಸಂಸದ ಕೋಟಾ ಸೂಚನೆ ನೀಡಿದರು.
ಘಟನೆಯನ್ನ ಕೇಂದ್ರದ ತನಿಖಾ ಸಂಸ್ಥೆಗೆ ವಹಿಸಬೇಕೆಂದು ಅವರು ಇದೇ ವೇಳೆ ಆಗ್ರಹ ಮಾಡಿದರಲ್ಲದೇ, ಮನಸ್ಸಿನಲ್ಲಿ ವಿಕಾರತೆ ತುಂಬಿದಾಗ, ಕಾನೂನಿನ ಮೇಲೆ ಗೌರವ ಇಲ್ಲದಾಗ ಈಗಾಗುತ್ತೆ. ಬಲ ಪ್ರಯೋಗದ ಮೂಲಕ ಏನೋ ಮಾಡ್ತೀವಿ ಅಂದಾಗ ಈ ರೀತಿಯ ವಾತಾವರಣ ನಿರ್ಮಾಣವಾಗುತ್ತೆ ಎಂದು ಘಟನೆ ವಿರುದ್ಧ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: