ಪತ್ನಿ—ಮಾವನ ಕಿರುಕುಳ: ಹೆಡ್ ಕಾನ್ ಸ್ಟೇಬಲ್ ಸಾವಿಗೆ ಶರಣು - Mahanayaka
1:33 PM Sunday 14 - September 2025

ಪತ್ನಿ—ಮಾವನ ಕಿರುಕುಳ: ಹೆಡ್ ಕಾನ್ ಸ್ಟೇಬಲ್ ಸಾವಿಗೆ ಶರಣು

tippanna
14/12/2024

ಬೆಂಗಳೂರು: ಪತ್ನಿ ಹಾಗೂ ಮಾವನ ಕಿರುಕುಳದಿಂದ ಮನನೊಂದು ಹೆಡ್ ಕಾನ್ ಸ್ಟೇಬಲ್ ವೊಬ್ಬರು ರೈಲಿಗೆ ತಲೆಕೊಟ್ಟು ಸಾವಿಗೆ ಶರಣಾಗಿರುವ ಘಟನೆ ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.


Provided by

ಹುಳಿಮಾವು ಪೊಲೀಸ್ ಠಾಣೆಯಲ್ಲಿ ಹೆಡ್ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ ತಿಪ್ಪಣ್ಣ (33 ) ಸಾವಿಗೆ ಶರಣಾದವರಾಗಿದ್ದಾರೆ. ಸಾವಿಗೂ ಮುನ್ನ ತನ್ನ ಪತ್ನಿ ಹಾಗೂ ಮಾವನ ವಿರುದ್ಧ ಡೆತ್ ನೋಟ್ ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬಿಜಾಪುರ ಮೂಲದ ತಿಪ್ಪಣ್ಣ ಅವರು ನಗರದ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗನಾಥ ಪುರದಲ್ಲಿ ವಾಸವಾಗಿದ್ದರು. ಮೂರು ವರ್ಷದ ಹಿಂದೆ ತಿಪ್ಪಣ್ಣ ಅವರು ಮದುವೆಯಾಗಿದ್ದರು, ಇತ್ತೀಚಿನ ದಿನಗಳಲ್ಲಿ ಪತ್ನಿ ಹಾಗೂ ಆಕೆಯ ತಂದೆಯ ಕಿರುಕುಳದಿಂದ ಮನನೊಂದಿದ್ದರು.

ಇವರಿಬ್ಬರ ವರ್ತನೆಯಿಂದ ಮಾನಸಿಕವಾಗಿ ತಿಪ್ಪಣ್ಣ ಅವರು ಬೇಸತ್ತಿದ್ದರು. ಮೊನ್ನೆ ಪತ್ನಿಯ ತಂದೆ ಯಮುನಪ್ಪ ಅವರು ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ.
ತಿಪ್ಪಣ್ಣ ಅವರು ಮಾವನಿಗೆ ಕರೆ ಮಾಡಿದಾಗಲೂ ನೀನು ಸತ್ತು ಹೋಗು ಆಗ ನನ್ನ ಮಗಳು ಚೆನ್ನಾಗಿ ಇರುತ್ತಾಳೆ ಎಂದು ಬೈದು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದಾರೆ. ಇದರಿಂದ ನೊಂದು ತಿಪ್ಪಣ್ಣ ಸಾವಿಗೆ ಶರಣಾಗಿದ್ದಾರೆ.
ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ