ಮೊಡವೆಗಳಿಂದ ಬೇಸತ್ತು ಹೋಗಿದ್ದೀರಾ? | ರಾಸಾಯನಿಕ ಕ್ರೀಮ್ ಹಚ್ಚೋದು ಬಿಡಿ, ಮಾವಿನ ಹಣ್ಣು ಬಳಸಿ - Mahanayaka
12:48 PM Friday 19 - September 2025

ಮೊಡವೆಗಳಿಂದ ಬೇಸತ್ತು ಹೋಗಿದ್ದೀರಾ? | ರಾಸಾಯನಿಕ ಕ್ರೀಮ್ ಹಚ್ಚೋದು ಬಿಡಿ, ಮಾವಿನ ಹಣ್ಣು ಬಳಸಿ

health tips
06/07/2021

ಮಹಿಳೆಯರಾಗಲಿ, ಪುರುಷರಾಗಲಿ ಚರ್ಮದ ಆರೈಕೆಯ ವಿಚಾರ ಬಂದರೆ ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಬೇರೆ ಬೇರೆ ಕಂಪೆನಿಗಳು ತಯಾರಿಸುವ ಸೌಂದರ್ಯ ವರ್ಧಕಕ್ಕೆ ಜನರು ಮುಗಿಬೀಳುತ್ತಾರೆ.  ಆದರೆ ರಾಸಾಯನಿಕ ಪದಾರ್ಥಗಳನ್ನು ಬಳಸಿ ತಯಾರಿಸುವ ಸೌಂದರ್ಯ ವರ್ಧಕಗಳು ಸುರಕ್ಷಿತವಲ್ಲ.

ನಮ್ಮ ಸುತ್ತಮುತ್ತಲಿರುವ ವಸ್ತುಗಳಲ್ಲಿಯೇ ಹಲವಾರು ಮದ್ದುಗಳಿರುತ್ತವೆ. ಇವುಗಳನ್ನು ನಾವು ಗುರುತಿಸಬೇಕಾದರೆ, “ಹಿತ್ತಲ ಗಿಡ ಮದ್ದಲ್ಲ” ಎನ್ನುವ ಮನಸ್ಥಿತಿಯಿಂದ ಮೊದಲು ನಾವು ಹೊರ ಬರಬೇಕಿದೆ.

ಇಂದು ಚರ್ಮದ ಆರೈಕೆಯಲ್ಲಿ ಮಾವಿನ ಕಾಯಿ ಹೇಗೆ ಕೆಲಸ ಮಾಡುತ್ತದೆ ಎನ್ನುವುದನ್ನು ನಾವು ಗಮನಿಸೋಣ:

ಹಣ್ಣುಗಳು ಸಾಮಾನ್ಯವಾಗಿ ಚರ್ಮದ ಪೋಷಣೆಗೆ ಸಹಕಾರಿಯಾಗುವಂತದ್ದಾಗಿದೆ. ಮಾವಿನ ಹಣ್ಣು ಚರ್ಮದ ಆರೈಕೆಗೆ ಪೂರಕವಾಗಿದ್ದು, ಮೊಡವೆ, ಚರ್ಮದ ಕಪ್ಪು ಕಲೆಗಳ ವಿರುದ್ಧ ಕೆಲಸ ಮಾಡುತ್ತದೆ.

ಮಾವು ಜೀವಸತ್ವಗಳ ಅದ್ಭುತ ಕಣಜವಾಗಿದೆ. ಮಾವಿನ ರಸ ಮತ್ತು ತಿರುಳು ಚರ್ಮ ನೈಸರ್ಗಿಕ ತ್ವಚೆಯನ್ನು ಸಂರಕ್ಷಿಸಲು ಸಹಕಾರಿಯಾಗಿದೆ. ಮಾವಿನ ತಿರುಳನ್ನು ಚರ್ಮದ ಮೇಲೆ ಹಚ್ಚುವುದರಿಂದ, ಮೊಡವೆಗಳನ್ನು ತಡೆಯಬಹುದಾಗಿದೆ.

ಚರ್ಮದ ಮೇಲಿನ ಬೆವರು ರಂಧ್ರಗಳು ಮುಚ್ಚಿದಾಗ ಮುಖದಲ್ಲಿ ಮೊಡವೆಗಳು ಸೃಷ್ಟಿಯಾಗುತ್ತವೆ. ಮಾವು ಶುದ್ಧೀಕರಣದ ಗುಣವನ್ನು ಹೊಂದಿದೆ. ಹೀಗಾಗಿ ಇದು ಚರ್ಮದ ಮೇಲಿನ ಬ್ಯಾಕ್ಟೀರಿಯಾಗಳನ್ನು ಹೊರ ಹಾಕುವ ಮೂಲಕ ಚರ್ಮವನ್ನು ಸ್ವಚ್ಛವಾಗಿಡುತ್ತದೆ.

ಇತ್ತೀಚಿನ ಸುದ್ದಿ