ಹೃದಯಾಘಾತ: 18 ವರ್ಷದ ವಿದ್ಯಾರ್ಥಿ ಬಲಿ - Mahanayaka

ಹೃದಯಾಘಾತ: 18 ವರ್ಷದ ವಿದ್ಯಾರ್ಥಿ ಬಲಿ

Aftab
08/07/2025


Provided by

ಮಂಗಳೂರು(Mahanayaka):   18 ವರ್ಷ ವಯಸ್ಸಿನ ವಿದ್ಯಾರ್ಥಿಯೊಬ್ಬ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ  ಮಂಗಳೂರು  ಹೊರವಲಯ ಸುರತ್ಕಲ್ ಬಳಿ ನಡೆದಿದೆ.

ಡಿಪ್ಲೋಮಾ ವಿದ್ಯಾರ್ಥಿ ಅಫ್ತಾಬ್ (18) ಹೃದಯಾಘಾತದಿಂದ ಸಾವನ್ನಪ್ಪಿದ ವಿದ್ಯಾರ್ಥಿಯಾಗಿದ್ದಾರೆ. ಮಂಗಳೂರು ಹೊರವಲಯ ಸುರತ್ಕಲ್ ಕೃಷ್ಣಾಪುರದಲ್ಲಿ ಅಫ್ತಾಬ್ ಕುಟುಂಬ ನೆಲೆಸಿತ್ತು.

ಮನೆಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದ ವೇಳೆ ಅಫ್ತಾಬ್ ಹೃದಯಾಘಾತಕ್ಕೊಳಗಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಅಫ್ತಾಬ್ ಸುರತ್ಕಲ್ ಸೆಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದುತ್ತಿದ್ದರು.

ಅಫ್ತಾಬ್ ಅಸ್ಗರ್ ಅಲಿ ಅವರ ನಾಲ್ಕು ಮಕ್ಕಳಲ್ಲಿ ಏಕೈಕ ಪುತ್ರ. ಅವರ ಮೂವರು ಸಹೋದರಿಯರು ವಿವಾಹವಾಗಿದ್ದಾರೆ. ಅವರ ತಾಯಿ ಕೋವಿಡ್ ಸಮಯದಲ್ಲಿ ನಿಧನರಾಗಿದ್ದರು. ಅಂದಿನಿಂದ ತಂದೆ ಮತ್ತು ಮಗ ಮಾತ್ರ ಒಟ್ಟಿಗೆ ವಾಸಿಸುತ್ತಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ