ರಿಕ್ಷಾ ಪಾರ್ಕ್ ನಲ್ಲಿ ಕ್ಯೂನಲ್ಲಿರುವಾಗಲೇ ಹೃದಯಾಘಾತ: ಆಟೋ ಚಾಲಕ ಸಾವು - Mahanayaka

ರಿಕ್ಷಾ ಪಾರ್ಕ್ ನಲ್ಲಿ ಕ್ಯೂನಲ್ಲಿರುವಾಗಲೇ ಹೃದಯಾಘಾತ: ಆಟೋ ಚಾಲಕ ಸಾವು

03/09/2024


Provided by

ಮಂಗಳೂರು: ರಿಕ್ಷಾ ಪಾರ್ಕ್ ನಲ್ಲಿ ಕ್ಯೂನಲ್ಲಿರುವಾಗಲೇ ಆಟೋ ಚಾಲಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ  ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ಸ್ಟೇಷನ್ ಬಳಿ ನಡೆದಿದೆ.

ಮಂಗಳೂರಿನ ಬಜಾಲ್ ವಿದ್ಯಾನಗರ ನಿವಾಸಿ ಇಕ್ಬಾಲ್(47) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಂಗಳೂರು ನಗರದ ಸೆಂಟ್ರಲ್ ರೈಲ್ವೇ ಸ್ಟೇಷನ್ ರಿಕ್ಷಾ ಪಾರ್ಕ್ ನಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಕ್ಯೂನಲ್ಲಿ ಆಟೋ ನಿಲ್ಲಿಸಿ ಕಾಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಏಕಾಏಕಿ ಎದೆನೋವು ಕಾಣಿಸಿಕೊಂಡು ಅಸ್ವಸ್ಥರಾದ ಇಕ್ಬಾಲ್ ಅವರನ್ನು ತಕ್ಷಣವೇ ಇತರ ರಿಕ್ಷಾ ಚಾಲಕರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ