ಚಿಕ್ಕಮಗಳೂರಿನಲ್ಲಿ ಅಬ್ಬರಿಸಿದ ಮಳೆ: ರಸ್ತೆಯಲ್ಲೇ ಉಕ್ಕಿ ಹರಿದ ಹಳ್ಳದ ನೀರು - Mahanayaka

ಚಿಕ್ಕಮಗಳೂರಿನಲ್ಲಿ ಅಬ್ಬರಿಸಿದ ಮಳೆ: ರಸ್ತೆಯಲ್ಲೇ ಉಕ್ಕಿ ಹರಿದ ಹಳ್ಳದ ನೀರು

rain
17/06/2024


Provided by

ಚಿಕ್ಕಮಗಳೂರು : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸಿದೆ. ಕಳಸ ತಾಲೂಕಿನ ಬಾಳೆಹೊಳೆ, ಕಗ್ಗನಳ್ಳ, ಮಹಲ್ಗೋಡು ಸುತ್ತಾಮುತ್ತ ಭಾರೀ ಮಳೆ‌ಯಾಗಿದೆ.

ಮಹಲ್ಗೋಡ್ ಸಮೀಪ ಹಳ್ಳ ಉಕ್ಕಿ ಹರಿದಿದೆ. ಮಳೆಯಿಂದಾಗಿ ಬಾಳೆಹೊನ್ನೂರು–ಕಳಸ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ.

ರಸ್ತೆಯಲ್ಲಿ ಹಳ್ಳದ ನೀರು ಉಕ್ಕಿಂದ್ರಿಂದ ವಾಹನ ಸವಾರರು ಪರದಾಡಿದ್ದಾರೆ. ಪಂಚವಟಿ ಎಸ್ಟೇಟ್ ನ ಕೆಲ ಮನೆಗಳಿಗೆ ಮಳೆ ನೀರು ನುಗ್ಗಿದೆ.  ಸತತ ಒಂದೂವರೆ ಗಂಟೆ ಸುರಿದ ಭಾರೀ ಮಳೆ‌ಗೆ ಜನ ಹೈರಾಣಾಗಿದ್ದಾರೆ.

ರಸ್ತೆಯಲ್ಲಿ ಹಳ್ಳದ ನೀರು ಉಕ್ಕಿಂದ್ರಿಂದ  ವಾಹನ ಸವಾರು ಹಾಗೂ ಸ್ಥಳೀಯರು ರಸ್ತೆ ತಡೆಯಾಗಿ ನಿಂತ ಕಸ ವಿಲೇವಾರಿ ಮಾಡಿದರು.

ಚಿಕ್ಕಮಗಳೂರು ಜಿಲ್ಲೆ ಕಳಸ ಹಾಗೂ ಎನ್.ಆರ್ ಪುರ ತಾಲೂಕಿನ ಗ್ರಾಮಗಳಲ್ಲಿ ಭಾರೀ ಮಳೆಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ