ಚಿಕ್ಕಮಗಳೂರಿನಲ್ಲಿ ಸುರಿದ ಧಾರಾಕಾರ ಮಳೆ! - Mahanayaka

ಚಿಕ್ಕಮಗಳೂರಿನಲ್ಲಿ ಸುರಿದ ಧಾರಾಕಾರ ಮಳೆ!

rain
03/04/2025


Provided by

ಚಿಕ್ಕಮಗಳೂರು:  ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿದೆ.  ಒಂದು ಗಂಟೆಗಿಂತಲೂ ಅಧಿಕ ಕಾಲ ಮಳೆ ಧಾರಾಕಾರವಾಗಿ ಸುರಿದಿದೆ.

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಬಣಕಲ್, ಬಾಳೂರು, ಚಾರ್ಮಾಡಿಘಾಟಿಯಲ್ಲಿ ಮಳೆ ಅಬ್ಬರಿಸಿದೆ.  ಸಂಜೆ ಒಂದು ಗಂಟೆಗಳ ಕಾಲ ಕಳಸ ತಾಲೂಕಿನಲ್ಲೂ ಭಾರೀ ಮಳೆಯಾಗಿದೆ.

ಚಿಕ್ಕಮಗಳೂರು–ತರೀಕೆರೆ ತಾಲೂಕಿನ ಮಧ್ಯಾಹ್ನ ಭಾರೀ ಮಳೆಯಾಗಿತ್ತು.  ಬೇಸಿಗೆಯಲ್ಲೇ ಮಳೆಗಾಲದಂತೆ ಸುರಿಯುತ್ತಿರೋ ಮಳೆ ಕಂಡು ಮಲೆನಾಡಿಗರಲ್ಲಿ ಭಯ ಸೃಷ್ಟಿಯಾಗಿದೆ.

ಬೇಸಿಗೆ ಕಾಲದಲ್ಲಿ ಮಳೆ ಬಂದು ಮಳೆಗಾಲದಲ್ಲಿ ಮಳೆರಾಯ ಕೈಕೊಡುತ್ತಾನಾ ಎಂಬ ಆತಂಕದಲ್ಲಿ ಮಲೆನಾಡು ಭಾಗದ ಜನರದ್ದಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ