ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ: ಬಂಟ್ವಾಳ ತಾಲೂಕಿನ ಹಲವರ ಮನೆಗಳಿಗೆ ಹಾನಿ - Mahanayaka
4:44 AM Thursday 16 - October 2025

ದಕ್ಷಿಣ ಕನ್ನಡದಲ್ಲಿ ಮಳೆ ಅಬ್ಬರ: ಬಂಟ್ವಾಳ ತಾಲೂಕಿನ ಹಲವರ ಮನೆಗಳಿಗೆ ಹಾನಿ

bantwala
01/10/2023

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಗಾಳಿಗೆ ಕೆಲವೆಡೆ ಮನೆಗಳಿಗೆ ಹಾನಿ ಸಂಭವಿಸಿದ ಘಟನೆ ನಡೆದಿದೆ.


Provided by

ಬಂಟ್ವಾಳ ಕಸಬಾ ಗ್ರಾಮದ ಮಣಿಹಳ್ಳ ಎಂಬಲ್ಲಿ ಬಿರುಗಾಳಿ ಹಾಗೂ ಮಳೆಗೆ ಭವಾನಿ ಕೋಂ ವಾಸು ಮೂಲ್ಯ, ಶ್ರೀಮತಿ ಕೋಂ ದಿವಾಕರ ಆಚಾರಿ, ಪೂರ್ಣಿಮಾ ಕೋಂ ಶೇಖರ, ಗುಲಾಬಿ ಕೋಂ ಆನಂದ, ಗುಲಾಬಿ ಕೋಂ ಸುಧಾಕರ, ಲಕ್ಷ್ಮಣ ಬಿನ್ ಅಣ್ಣ ಮೂಲ್ಯ ಅವರುಗಳ ಮನೆಗಳ ಹಂಚು ಮೇಲ್ಛಾವಣಿಗೆ ಭಾಗಶ ಹಾನಿ ಸಂಭವಿಸಿದೆ.

ಬರಿಮಾರು ನಿವಾಸಿ ಗುರುಪ್ರಸಾದ್ ಬಲ್ಯ ಅವರ ವಾಸ್ತವ್ಯದ ಮನೆಯ ಮೇಲ್ಛಾವಣಿ ಭಾಗಶಃ ಹಾನಿಗೊಂಡಿದೆ ಎಂದು ತಾಲೂಕು ಕಚೇರಿ ಮಾಹಿತಿ ತಿಳಿಸಿದೆ.

ಇತ್ತೀಚಿನ ಸುದ್ದಿ