ಮಂಗಳೂರಿನಲ್ಲಿ ಭಾರೀ ಮಳೆ: ಪರದಾಡಿದ ಶಾಲಾ ಮಕ್ಕಳು, ಜನ ಜೀವನ ಅಸ್ತವ್ಯಸ್ಥ

14/07/2025
Mahanayaka-ಮಂಗಳೂರು: ಇಂದು(ಜು.17) ಮಂಗಳೂರಿನಾದ್ಯಂತ ಭಾರೀ ಮಳೆಯಾಗುತ್ತಿದೆ. ಬೆಳಗ್ಗಿನಿಂದ ಆರಂಭಗೊಂಡ ಮಳೆ ಸಂಜೆಯಾದರೂ ಕಡಿಮೆಯಾಗುವ ಲಕ್ಷಣ ಕಂಡು ಬಂದಿಲ್ಲ, ಭಾರೀ ಕಾರ್ಮೋಡ ಕವಿದು ಮತ್ತೆ ಮತ್ತೆ ಮಳೆಯಾಗುತ್ತಿದೆ.
ಇಂದು ಬೆಳಗ್ಗಿನಿಂದಲೇ ನಿರಂತರ ಮಳೆ ಆರಂಭವಾದ ಕಾರಣ ನಗರದ ವಿದ್ಯಾರ್ಥಿಗಳು ಶಾಲೆಗೆ ತೆರಳಲು ಪರದಾಡುವಂತಾಯಿತು. ಟ್ರಾಫಿಕ್ ಜಾಮ್ ನಿಂದ ಶಾಲಾ ವಾಹನ ಚಾಲಕರು ಶಾಲಾ ಸಮಯಕ್ಕೆ ಮಕ್ಕಳನ್ನು ತಲುಪಿಸಲು ಪರದಾಡಿದರು.
ಶಾಲೆ ಬಿಡುವ ಸಮಯದಲ್ಲೂ ಗುಡುಗು ಮಳೆ ಸುರಿದಿದ್ದು, ವಿದ್ಯಾರ್ಥಿಗಳು ಮಳೆಯಲ್ಲಿ ಮನೆಗಳಿಗೆ ತೆರಳಲು ಪರದಾಡುವಂತಾಯಿತು. ಸಾಕಷ್ಟು ವಿದ್ಯಾರ್ಥಿಗಳು ಒದ್ದೆಯಾಗುತ್ತಾ, ತಮ್ಮ ಮನೆಯ ಕಡೆಗೆ ತೆರಳುತ್ತಿರುವ ದೃಶ್ಯ ಕಂಡು ಬಂತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: