ಕರಾವಳಿಯಲ್ಲಿ ಭಾರೀ ಮಳೆ: ರಾಜ್ಯದಲ್ಲಿ ಎಲ್ಲೆಲ್ಲಿ ಮಳೆಯಾಗುತ್ತಿದೆ, ಇಲ್ಲಿದೆ ವಿವರ

ಬೆಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ಹಲವಾರು ದಿನಗಳಿಂದ ಮಳೆ ಎಡೆಬಿಡದೇ ಸುರಿಯುತ್ತಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಇಂದೂ ಕೂಡಾ ಭಾರೀ ಮಳೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಇನ್ನು ಮೈಸೂರು, ಮಂಡ್ಯ, ಚಾಮರಾಜನಗರ, ಧಾರವಾಡ, ಬೀದರ್, ಬೆಳಗಾವಿ, ರಾಯಚೂರು, ಕಲಬುರಗಿ, ಹಾವೇರಿ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ತುಮಕೂರು, ರಾಮನಗರ, ಕೋಲಾರ, ದಾವಣಗೆರೆ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೊಪ್ಪಳದಲ್ಲಿ ಇಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಾರವಾರ, ಮಂಗಳೂರು, ಸಿದ್ದಾಪುರ, ಗೋಕರ್ಣ, ಬಂಟ್ವಾಳ, ಮಾಣಿ, ಕುಮಟಾ, ಸುಳ್ಯ, ಶಿರಾಲಿ, ಬೆಳ್ತಂಗಡಿ, ಉಡುಪಿ, ಮಂಕಿ, ಶಕ್ತಿನಗರ, ಕೋಟಾ, ಕದ್ರಾ, ಯಲ್ಲಾಪುರ, ಧರ್ಮಸ್ಥಳ, ಜೋಯ್ಡಾ, ಹೊನ್ನಾವರ, ಕುಂದಾಪುರ, ಭಾಗಮಂಡಲ, ನಾಪೋಕ್ಲು, ಪೊನ್ನಂಪೇಟೆ, ಆಗುಂಬೆ, ಶೃಂಗೇರಿ, ಸೋಮವಾರಪೇಟೆ, ಗೋಕಾಕ್, ಹುಕ್ಕೇರಿ, ರಾಯಚೂರು, ಥೊಂಡೇಬಾವಿ, ಬಾದಾಮಿ, ವಿಜಯಪುರ, ಮುದ್ದೇಬಿಹಾಳ, ಮಾನ್ವಿ, ರೋಣ, ಹಾವೇರಿ, ನರಗುಂದ, ಮುಂಡಗೋಡು, ಗುರುಮಿಟ್ಕಲ್, ಹಿಡಕಲ್, ತಿಪಟೂರು, ಪಾವಗಡ, ಕೊಪ್ಪ, ಸೇಡಬಾಳ, ರಾಯಲ್ಪಾಡು, ಕೊಪ್ಪ, ಕಮ್ಮರಡಿ, ಎಚ್ಡಿ ಕೋಟೆ, ಮಧುಗಿರಿ, ಹೊನ್ನಾಳಿ, ಹರಪನಹಳ್ಳಿ, ಕೋಲಾರದಲ್ಲಿ ಮಳೆಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: