ಪ್ರೀತಿಯಿಂದ ಹೆಗಲಿಗೆ ಕೈ ಇಟ್ಟ ಕಾರ್ಯಕರ್ತನ ತಲೆಗೆ ಹೊಡೆದ ಡಿ.ಕೆ.ಶಿವಕುಮಾರ್ - Mahanayaka
5:47 AM Saturday 17 - January 2026

ಪ್ರೀತಿಯಿಂದ ಹೆಗಲಿಗೆ ಕೈ ಇಟ್ಟ ಕಾರ್ಯಕರ್ತನ ತಲೆಗೆ ಹೊಡೆದ ಡಿ.ಕೆ.ಶಿವಕುಮಾರ್

dk shivakumar
10/07/2021

ಮಂಡ್ಯ: ಹೆಗಲ ಮೇಲೆ ಕೈ ಇಟ್ಟ ಕಾಂಗ್ರೆಸ್ ಕಾರ್ಯಕರ್ತರೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಲೆಗೆ ಬಾರಿಸಿದ ಪ್ರಸಂಗ ನಡೆಸಿದ್ದು, ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

 ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಶುಕ್ರವಾರ ಸಂಜೆ ಅವರು ಭಾರತೀನಗರಕ್ಕೆ ಬಂದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

ಶಿವಕುಮಾರ್ ಅವರು ಆಸ್ಪತ್ರೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಕಾರ್ಯಕರ್ತನೋರ್ವ ಅಣ್ಣಾ ಎಂದು ಪ್ರೀತಿಯಿಂದ ಹೆಗಲ ಮೇಲೆ ಕೈ ಇಟ್ಟಿದ್ದಾರೆನ್ನಲಾಗಿದ್ದು, ಈ ವೇಳೆ ಸಿಟ್ಟುಗೊಂಡ ಶಿವಕುಮಾರ್ ಕಾರ್ಯಕರ್ತರನ ತಲೆಗೆ ಬಾರಿಸಿ, ಬೈದಿದ್ದಾರೆ ಎಂದು ಹೇಳಲಾಗಿದೆ.

“ನಿನಗೆ ಸಾಮಾನ್ಯ ಜ್ಞಾನ ಇಲ್ಲವೇ?, ವಿಡಿಯೋ ಮಾಡುತ್ತಿದ್ದಾರೆ ಎನ್ನುವ ಕಾರಣಕ್ಕೆ ಹೆಗಲ ಮೇಲೆ ಕೈ ಇಡುತ್ತೀಯಾ?” ಎಂದು ಡಿ.ಕೆ.ಶಿವಕುಮಾರ್ ಸ್ಥಳದಲ್ಲಿಯೇ ಕಾರ್ಯಕರ್ತನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದ್ದು, ಡಿ.ಕೆ.ಶಿವಕುಮಾರ್ ಅವರ ವರ್ತನೆಯಿಂದ ಸ್ಥಳದಲ್ಲಿದ್ದವರು ಕೆಲ ಕಾಲ ಗೊಂದಲಕ್ಕೊಳಗಾಗಿದ್ದಾರೆ.

ಇನ್ನೂ ಈ ಘಟನೆಯನ್ನು ಬಿಜೆಪಿ ಖಂಡಿಸಿದ್ದು, ಡಿ.ಕೆ.ಶಿವಕುಮಾರ್ ಸಾರ್ವಜನಿಕ ಜೀವನದಲ್ಲಿ ಇದ್ದುಕೊಂಡು ಮಾಧ್ಯಮಗಳ ಎದುರು ವ್ಯಕ್ತಿಗೆ ಹಲ್ಲೆ ನಡೆಸಿರುವುದು ಅವರ ಉಗ್ರ ಮನಸ್ಥಿತಿಯನ್ನು ತೋರಿಸುತ್ತದೆ. ಹಿಂದೆ ಸೆಲ್ಫಿ ತೆಗೆಯಲು ಬಂದ ಕಾರ್ಯಕರ್ತನ ಮೇಲೆ ಡಿಕೆಶಿ ಹಲ್ಲೆ ಮಾಡಿದ್ದರು. ಡಿಕೆಶಿ ಅವರೇ ನೀವು ರಾಜಕಾರಣಿಯೋ, ರೌಡಿಯೋ ಎಂದು ಪ್ರತಿಕ್ರಿಯಿಸಿದೆ.

ಇತ್ತೀಚಿನ ಸುದ್ದಿ