ಹೆಮ್ಮಾಡಿ ಸ್ಥಳೀಯ ಸಮಸ್ಯೆಗಳ ವಿರುದ್ಧ ಸಿಪಿಎಂ ಪ್ರತಿಭಟನೆ - Mahanayaka

ಹೆಮ್ಮಾಡಿ ಸ್ಥಳೀಯ ಸಮಸ್ಯೆಗಳ ವಿರುದ್ಧ ಸಿಪಿಎಂ ಪ್ರತಿಭಟನೆ

cpm protest
27/08/2022


Provided by

ಹೆಮ್ಮಾಡಿ: ಸಿಪಿಎಂ ಪಕ್ಷದ ಹೆಮ್ಮಾಡಿ  ಶಾಖೆಯ ನೇತ್ರತ್ವದಲ್ಲಿ  ಹೆಮ್ಮಾಡಿ ಗ್ರಾಮದ ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸಲು ಆಗ್ರಹಿಸಿ ಗ್ರಾಮಪಂಚಾಯತ್ ಎದುರು ಪ್ರತಿಭಟನೆ ನಡೆಸಲಾಯಿತು.

ಬೈಂದೂರು ವಲಯ ಸಮಿತಿ ಮುಖಂಡ ಸಂತೋಷ ಹೆಮ್ಮಾಡಿ ಮಾತನಾಡಿ, ಹೆಮ್ಮಾಡಿ ಗ್ರಾಮದಲ್ಲಿರುವ ಹಲವಾರು ಸಮಸ್ಯೆಗಳ ಬಗ್ಗೆ ಕಳೆದ ಹಲವು ವರ್ಷಗಳಿಂದ ಮನವಿ ನೀಡಲಾಗುತ್ತಿದೆ. ಆದರೆ ಹಲವು ಸಮಸ್ಯೆಗಳು ಬಗೆಹರಿದಿಲ್ಲ ಜನರ ಬೇಡಿಕೆಗಳನ್ನು ಆದ್ಯತಾ ನೆಲೆಯಲ್ಲಿ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.

ಬೇಡಿಕೆಗಳು:

  1. ಕಾಸನಾಡಿ ಬೊಬ್ಬರ್ಯ ದೇವಸ್ಥಾನದ -ನಡುಬೆಟ್ಟು ರಸ್ತೆಯ ಕಾಂಕ್ರೀಟಿಕರಣ ಪೂರ್ಣಗೊಳಿಸಬೇಕು.
  2. ಹೆಮ್ಮಾಡಿ ಹೆಮ್ಮಾಡಿ ಪೇಟೆಯ ಕೊಲ್ಲೂರು ರಸ್ತೆಯ ಪ್ರದೇಶದಲ್ಲಿ ಭಟ್ರ ಬೆಟ್ಟು ಮನೆಗಳಿಗೆ ನುಗ್ಗುತ್ತಿರುವ ನೀರನ್ನು ತಡೆಯಲು ಚರಂಡಿ ವ್ಯವಸ್ಥೆ ಮಾಡಬೇಕು.
  3. ಕಟ್ಟಿನ ರಸ್ತೆಯ ಬದಿಯಲ್ಲಿರುವ ಸುಗ್ಗಿ ತೋಡು ಹೂಳೆತ್ತಬೇಕು.
  4. ಹೆಮ್ಮಾಡಿ ಕೊಟ್ಟು ರಸ್ತೆಯ ಕೃಷಿ ಭೂಮಿ ಮುಳುಗಡೆ ತಪ್ಪಿಸಲು ಚರಂಡಿ ವ್ಯವಸ್ಥೆ ದುರಸ್ತಿ ಮಾಡಬೇಕು.
  5. ಕನ್ನಡ ಕುದ್ರು,ಕಟ್ಟು,ಸಂತೋಷ ನಗರಗಳಿಗೆ ಹಲವಾರು ವರ್ಷದ ಬೇಡಿಕೆಯಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಲಾಯಿತು.

ಪ್ರತಿಭಟನೆಯಲ್ಲಿ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿದರು. ಪಂಚಾಯತ್ ಅಧ್ಯಕ್ಷರಾದ ಸುಧಾಕರ ಎನ್ ದೇವಾಡಿಗ ಮಾಜಿ ಅಧ್ಯಕ್ಷರಾದ ಸತ್ಯನಾರಾಯಣ ರಾವ್, ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಮಂಜಯ್ಯ ಬಿಲ್ಲವ ಮನವಿ ಸ್ವೀಕರಿಸಿದರು.

ಪಕ್ಷದ ಶಾಖಾ ಕಾರ್ಯದರ್ಶಿ ಜಗದೀಶ ಆಚಾರ್,ಕಟ್ಟಡ ಕಾರ್ಮಿಕರ ಘಟಕದ ಅಧ್ಯಕ್ಷ ಗಣೇಶ್ ಆಚಾರ್, ಕಾರ್ಯದರ್ಶಿ ನರಸಿಂಹ ದೇವಾಡಿಗ ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ