5 ವರ್ಷದ ಮಗುವಿನಂತೆ ಶೃಂಗರಿಸಲಾದ ರಾಮಲಲ್ಲಾ ವಿಗ್ರಹದ ಚಿತ್ರ ಇಲ್ಲಿದೆ - Mahanayaka
8:40 PM Thursday 20 - November 2025

5 ವರ್ಷದ ಮಗುವಿನಂತೆ ಶೃಂಗರಿಸಲಾದ ರಾಮಲಲ್ಲಾ ವಿಗ್ರಹದ ಚಿತ್ರ ಇಲ್ಲಿದೆ

ram 1
22/01/2024

ಅಯೋಧ್ಯೆ ರಾಮಮಂದಿರದಲ್ಲಿ ಇಂದು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ನೆರವೇರಿದೆ. ಇದೇ ಸಂದರ್ಭದಲ್ಲಿ ಚಿನ್ನದಲ್ಲಿ ಅಲಂಕರಿಸಿ ರಾಮಲಲ್ಲಾ ವಿಗ್ರಹದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವಿಶೇಷವಾಗಿ ಗಮನ ಸೆಳೆದವು.

ಭಗವಾನ್ ರಾಮನನ್ನು ಐದು ವರ್ಷದ ಮಗುವಿನಂತೆ ಶೃಂಗರಿಸಲಾಗಿದೆ. ರಾಮಲಲ್ಲಾ ವಿಗ್ರವು ಚಿನ್ನದ ಆಭರಣಗಳಿಂದ ಕಂಗೊಳಿಸುತ್ತಿತ್ತು.

ಕಪ್ಪು ಕಲ್ಲಿನಿಂದ ಕೆತ್ತಿದ 51 ಇಂಚಿನ ವಿಗ್ರಹಕ್ಕೆ ಹಳದಿ ಧೋತಿ, ಚಿನ್ನದ ಕಿರೀಟ, ಹಾರಗಳು, ಚಿನ್ನದ ಬಿಲ್ಲು ಮತ್ತು ಬಾಣಗಳನ್ನಿಟ್ಟು ಅಲಂಕರಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಿದ್ದರು. ಪ್ರಾಣ ಪ್ರತಿಷ್ಠಾಪನೆಯ ನಂತರ ಪ್ರಧಾನಮಂತ್ರಿಯವರು ಗರ್ಭಗುಡಿಯೊಳಗೆ ಆರತಿಯನ್ನೂ ಮಾಡಿದರು.

ಇತ್ತೀಚಿನ ಸುದ್ದಿ