“ಹೇ ಮಹದೇವಪ್ಪ ಸಿಎಂ ಕಿವಿ ತುಂಬೇಡ ನೀನು”: ಸಚಿವ ಮಹದೇವಪ್ಪಕ್ಕೆ ಖರ್ಗೆ ಕ್ಲಾಸ್! - Mahanayaka

“ಹೇ ಮಹದೇವಪ್ಪ ಸಿಎಂ ಕಿವಿ ತುಂಬೇಡ ನೀನು”: ಸಚಿವ ಮಹದೇವಪ್ಪಕ್ಕೆ ಖರ್ಗೆ ಕ್ಲಾಸ್!

mallikarjuna kharge
19/07/2025


Provided by

ಮೈಸೂರು:  “ಹೇ ಮಹದೇವಪ್ಪ ಅವರ ಕಿವಿ ತುಂಬೇಡ ನೀನು” ಅಂತ ಸಚಿವ ಹೆಚ್.ಸಿ. ಮಹದೇವಪ್ಪ ಅವರನ್ನು ವ್ಯಂಗ್ಯವಾಗಿಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತರಾಟೆಗೆತ್ತಿಕೊಂಡ ಘಟನೆ ಸಾಧನಾ ಸಮಾವೇಶದಲ್ಲಿ ನಡೆಯಿತು.

ಅತ್ತ ಮಲ್ಲಿಕಾರ್ಜುನ ಖರ್ಗೆ ಗಂಭೀರವಾಗಿ ಭಾಷಣ ಮಾಡುತ್ತಿದ್ದರೆ, ಇತ್ತ ಸಚಿವ ಮಹದೇವಪ್ಪ, ಸಿಎಂ ಸಿದ್ದರಾಮಯ್ಯನವರ ಕಿವಿಯಲ್ಲಿ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ ಖರ್ಗೆ ನಯವಾಗಿಯೇ ತರಾಟೆಗೆತ್ತಿಕೊಂಡಿದ್ದಾರೆ.

ಹೇ ಮಹದೇವಪ್ಪ…, ನೀನು ಇಲ್ಲಿ ಕೇಳು, ಅವರ ಕಿವಿ ತುಂಬೇಡ ನೀನು, ಕಿವಿ ಸರಿಯಾಗಿದೆ ಅವರದ್ದು,  ಸ್ವಲ್ಪ ಇಲ್ಲಿ ಕೇಳಲಿ ಎಂದು ಖರ್ಗೆ ಮಹದೇವಪ್ಪ ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಖರ್ಗೆ ಮಾತಿಗೆ ನಕ್ಕು ಸುಮ್ಮನಾದರು.

ಒಂದೆಡೆ ಡಿ.ಕೆ.ಶಿವಕುಮಾರ್ ಸಾಧನಾ ಸಮಾವೇಶದಿಂದ ಅರ್ಧದಲ್ಲೇ ಎದ್ದು ಹೋಗಿ, ಸಿಎಂ ಸಿದ್ದರಾಮಯ್ಯನವರ ಆಕ್ರೋಶಕ್ಕೆ ಕಾರಣರಾಗಿದ್ದರು. ಇತ್ತ ವೇದಿಕೆಯಲ್ಲಿ ಗಣ್ಯರು ಮಾತನಾಡುತ್ತಿದ್ದರೆ, ಇತರರು ತಮ್ಮದೇ ಲೋಕದಲ್ಲಿ ಮುಳುಗಿರುವುದು ಖರ್ಗೆ ಅವರಿಗೆ ಅಸಮಾಧಾನ ಉಂಟು ಮಾಡಿತ್ತು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ