ಅರೆ, WWE ಸ್ಟಾರ್ ದೈತ್ಯ ಬೌಟಿಸ್ಟಾಗೆ ಏನಾಯ್ತು?: ಹೇಗಿದ್ದ ಬೌಟಿಸ್ಟಾ ಹೇಗಾದ? - Mahanayaka
7:12 AM Tuesday 16 - September 2025

ಅರೆ, WWE ಸ್ಟಾರ್ ದೈತ್ಯ ಬೌಟಿಸ್ಟಾಗೆ ಏನಾಯ್ತು?: ಹೇಗಿದ್ದ ಬೌಟಿಸ್ಟಾ ಹೇಗಾದ?

bautista
09/09/2024

WWE ಮನರಂಜನಾ ಕುಸ್ತಿ ಪಟು ಬೌಟಿಸ್ಟಾ ದೈತ್ಯದೇಹ ಎಂತಹವರನ್ನೂ ಸೆಳೆಯಬಹುದು. ಆದ್ರೆ, ಇದೀಗ ಬೌಟಿಸ್ಟಾ ತಮ್ಮ ದೇಹದ ತೂಕವನ್ನು ಕಳೆದುಕೊಳ್ಳುತ್ತಿದ್ದು, ಅಭಿಮಾನಿಗಳಿಗೆ ಶಾಕ್ ಆಗಿದೆ.


Provided by

ಬೌಟಿಸ್ಟಾ WWE ಬಳಿಕ  2009ರಲ್ಲಿ ಮೈ ಸನ್, ಮೈ ಸನ್, ವಾಟ್ ಹ್ಯಾವ್ ಯೆ ಡನ್ ಚಿತ್ರದ ಮೂಲಕ ಹಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಇದರ ನಂತರ ರಾಂಗ್ ಸೈಡ್ ಆಫ್ ಟೌನ್, ಗಾರ್ಡಿಯನ್ಸ್ ಆಫ್ ದಿ ಗ್ಯಾಲಕ್ಸಿ, ಆರ್ಮಿ ಆಫ್ ದಿ ಡೆಡ್‌,  ಜಗತ್ಪ್ರಸಿದ್ಧ ಅವೆಂಜರ್ಸ್ ಸಿನಿಮಾದಲ್ಲೂ ಪಾತ್ರ ನಿರ್ವಹಿಸಿದ್ದರು.

ಇತ್ತೀಚೆಗೆ ಬೌಟಿಸ್ಟಾ ಅವರ ಫೋಟೋವೊಂದು ಹೊರ ಬಿದ್ದಿದ್ದು, ಈ ಫೋಟೋ ಕಂಡು ಅಭಿಮಾನಿಗಳು ಶಾಕ್ ಆಗಿದ್ದಾರೆ. ದೈತ್ಯ ದೇಹದ ಬೌಟಿಸ್ಟಾ ತೂಕ ಕಳೆದುಕೊಂಡಿದ್ದಾರೆ. ಈಗ ಸ್ಲಿಮ್ಮರ್ ಆಗಿ ಕಾಣಿಸ್ತಾ ಇದ್ದಾರೆ.

ಅಂದ ಹಾಗೆ ಬೌಟಿಸ್ಟಾ ತಮ್ಮ ದೇಹದ ತೂಕವನ್ನು ಇಳಿಸ್ತಾ ಇದ್ದಾರಂತೆ. ಅವರು 19 ವರ್ಷಗಳಿಂದಲೂ ದೇಹದಾರ್ಡ್ಯತೆ ಆರಂಭಿಸಿದ್ದರು. ತಮ್ಮ ವೃತ್ತಿ ಜೀವನದ ಉದ್ದಕ್ಕೂ131KG ತೂಕವನ್ನು ಹೊಂದಿದ್ದರಂತೆ. ಇದೀಗ ಇವರ ದೇಹದ ತೂಕ 108KGಗೆ ಇಳಿಸಿದ್ದಾರಂತೆ. ತೂಕ ಇಳಿಸುವುದು ಬಹಳ ಕಠಿಣವಾದ ಕೆಲಸ. ನಾನು ನನ್ನ ಆಹಾರ ಕ್ರಮಗಳನ್ನು ತೂಕ ಇಳಿಸುವುದಕ್ಕಾಗಿ ಬದಲಿಸಿಕೊಂಡಿದ್ದೇನೆ ಅಂತ ಬೌಟಿಸ್ಟಾ ಹೇಳಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ