ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಶವ ಸೂಟ್ ಕೇಸ್ ನಲ್ಲಿ ಪತ್ತೆ ಪ್ರಕರಣ: ಪ್ರಿಯಕರನ ಬಂಧನ - Mahanayaka
3:46 AM Monday 15 - September 2025

ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಶವ ಸೂಟ್ ಕೇಸ್ ನಲ್ಲಿ ಪತ್ತೆ ಪ್ರಕರಣ: ಪ್ರಿಯಕರನ ಬಂಧನ

03/03/2025

ಮಾರ್ಚ್ 1 ರಂದು ರೋಹ್ಟಕ್ ನ ಹೆದ್ದಾರಿ ಬಳಿ ಸೂಟ್ ಕೇಸ್ ನಲ್ಲಿ ಶವವಾಗಿ ಪತ್ತೆಯಾದ ಕಾಂಗ್ರೆಸ್ ಕಾರ್ಯಕರ್ತೆ ಹಿಮಾನಿ ನರ್ವಾಲ್ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಹರಿಯಾಣ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ವರದಿಗಳ ಪ್ರಕಾರ, ಆರೋಪಿ ಆಕೆಯ ಗೆಳೆಯನಾಗಿದ್ದು, ನರ್ವಾಲ್ ಳನ್ನು ಈತ ಮನೆಯಲ್ಲಿ ಕೊಂದಿದ್ದಾನೆ. ಆ ವ್ಯಕ್ತಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಝೀ ನ್ಯೂಸ್ ವರದಿ ಹೇಳಿದೆ.


Provided by

ಆರೋಪಿಯ ಬಳಿಯಿಂದ ನರ್ವಾಲ್ ಅವರ ಮೊಬೈಲ್ ಮತ್ತು ಆಭರಣಗಳನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯು ನರ್ವಾಲ್ ಅವರೊಂದಿಗೆ ದೀರ್ಘಕಾಲದಿಂದ ಸಂಬಂಧ ಹೊಂದಿದ್ದ ಮತ್ತು ನರ್ವಾಲ್ ಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಪಿ ಬಹದ್ದೂರ್ ಘರ್ ನಿವಾಸಿಯಾಗಿದ್ದಾನೆ.

ಹಿಮಾನಿ ನರ್ವಾಲ್ ಹತ್ಯೆಯ ಬಗ್ಗೆ ಇತರ ಕೋನಗಳಲ್ಲಿ ತನಿಖೆ ನಡೆಸಲು ಪೊಲೀಸರು ವಿಶೇಷ ತನಿಖಾ ಕಾರ್ಯಪಡೆಯನ್ನು ರಚಿಸಿದ್ದಾರೆ. ಸಂಪ್ಲಾ ಡಿಎಸ್ಪಿ ರಜನೀಶ್ ಕುಮಾರ್ ಮಾತನಾಡಿ, “ಎಸ್ಐಟಿ ರಚಿಸಲಾಗಿದೆ. ಆಕೆಯ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ನಾವು ಸೈಬರ್ ಮತ್ತು ಎಫ್ಎಸ್ಎಲ್ ಬಳಸುತ್ತಿದ್ದೇವೆ. ನಾವು ಎಲ್ಲಾ ಕೋನಗಳಲ್ಲಿ ತನಿಖೆ ನಡೆಸುತ್ತಿದ್ದೇವೆ” ಎಂದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ