ಹಿಂದೂಗಳಿಗೆ ರಕ್ಷಣೆ ಒದಗಿಸಲಾಗದ ಸರ್ಕಾರ: ಬಿಜೆಪಿ ಸರ್ಕಾರದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ - Mahanayaka

ಹಿಂದೂಗಳಿಗೆ ರಕ್ಷಣೆ ಒದಗಿಸಲಾಗದ ಸರ್ಕಾರ: ಬಿಜೆಪಿ ಸರ್ಕಾರದ ವಿರುದ್ಧ ಚಕ್ರವರ್ತಿ ಸೂಲಿಬೆಲೆ ಕಿಡಿ

chakrawarthy sulibele
23/02/2022


Provided by

ಶಿವಮೊಗ್ಗ: ಹಿಂದೂಗಳಿಗೆ ರಕ್ಷಣೆ ಒದಗಿಸಲಾಗದ ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ನಿರ್ವೀರ್ಯ ಸರ್ಕಾರ ಚಕ್ರವರ್ತಿ ಸೂಲಿಬೆಲೆ ಬಣ್ಣಿಸಿದ್ದಾರೆ.

ಶಿವಮೊಗ್ಗನಲ್ಲಿ ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಮನೆಗೆ ಭೇಟಿ ನೀಡಿದ ಬಳಿಕ ಚಕ್ರವರ್ತಿ ಸೂಲಿಬೆಲೆ ಮಾಧ್ಯಮವರೊಂದಿಗೆ ಮಾತಾಡಿ, ಹರ್ಷನ ಶವಯಾತ್ರೆ ನಡೆಯುವಾಗ ಕಲ್ಲೆಸದವರ ಮೇಲೆ ಯಾಕೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ?ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈಶ್ವರಪ್ಪ ಶವಯಾತ್ರೆಯಲ್ಲಿ ಪಾಲ್ಗೊಂಡು ಒಂದೆರಡು ತಾಸುಗಳನ್ನು ಹರ್ಷನ ಕುಟುಂಬದೊಂದಿಗೆ ಕಳೆದರೆ ಏನು ಸಾಧಿಸಿದಂತಾಯ್ತು? ಶಿವಮೊಗ್ಗ ಉರಿಯುವ ಕೆಂಡದ ಹಾಗೆ ಅಂತ ಗೊತ್ತಿದ್ದರೂ ಸರ್ಕಾರ ಕಳೆದ 4 ವರ್ಷಗಳಿಂದ ಸರ್ಕಾರ ಏನೆಂದರೆ ಏನೂ ಮಾಡಿಲ್ಲ ಎಂದು ಸೂಲಿಬೆಲೆ ಕಿಡಿಕಾರಿದರು.

ಮುಸಲ್ಮಾನರು ಭಯದ ವಾತಾವರಣ ನಿರ್ಮಿಸಿದ್ದಾರೆ. ಹಿಂದೂಗಳು ಮನೆಯಿಂದ ಹೊರಗೆ ಬರಲು ಸಹ ಹೆದರುವ ಸ್ಥಿತಿ ನಿರ್ಮಿಸಬೇಕೆನ್ನುವುದು ಅವರು ಉದ್ದೇಶವಾಗಿದೆ. ಹಿಂದೂಗಳ ಮನಸ್ಸಿನಲ್ಲಿ ಅತಂಕ ಸೃಷ್ಟಿಸುವಲ್ಲಿ ಅವರು ಯಶ ಕಂಡಿದ್ದಾರೆ ಎಂದು ಹೇಳಿದರು.

ನಮ್ಮ ದೇಶದಲ್ಲಿ ಹಿಂದೂಗಳಿಗೆ ಬಾಬರ್, ಅಕ್ಬರ್, ಔರಂಗಜೇಬ ಮೊದಲಾದವರ ಆಳ್ವಿಕೆಯ ಕಾಲಕ್ಕೆ ವಾಪಸ್ಸು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ದುರಂತ, ಹಿಂದೂಗಳು ಸರ್ಕಾರಕ್ಕೆ ಈಗ ಒಂದೇ ಪ್ರಶ್ನೆ ಕೇಳಬೇಕಾಗಿದೆ. ಹಿಂದೂಗಳ ರಕ್ಷಣೆ ನಿಮ್ಮಿಂದ ಸಾಧ್ಯವೇ ಅಥವಾ ಅದನ್ನು ಅವರೇ ಮಾಡಿಕೊಳ್ಳಬೇಕೆ? ಎಂದು ಸೂಲಿಬೆಲೆ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

4-5 ಜನರನ್ನು ಬಂಧಿಸಿರುವುದೇ ಸರ್ಕಾರದ ದೊಡ್ಡ ಸಾಧೆನೆಯೇ? ಎಲ್ಲ ವ್ಯವಸ್ಥೆಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡು ಬಂಧಿಸಿದ್ದೇ ದೊಡ್ಡ ಸಾಧನೆ ಎಂದು ಸರ್ಕಾರ ಹೇಳುವುದು ನಾಚಿಕೆಗೇಡಿನ ಸಂಗತಿ ಎಂದು ಸೂಲಿಬೆಲೆ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕ್ರಿಕೆಟ್ ಆಡುತ್ತಿರುವಾಗ ಮೈದಾನದಲ್ಲೇ ಕುಸಿದು ಬಿದ್ದು ವ್ಯಕ್ತಿ ಸಾವು

ನಟ ಚೇತನ್ ಅಹಿಂಸಾ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಶಾರ್ಟ್ ಸರ್ಕ್ಯೂಟ್: ಖಾಸಗಿ ಬಸ್ ಬೆಂಕಿಗೆ ಆಹುತಿ

ನಟ ಚೇತನ್ ಪೊಲೀಸ್ ವಶಕ್ಕೆ: ಚೇತನ್ ಎಲ್ಲಿದ್ದಾರೆ ಅನ್ನೋದು ಗೊತ್ತಿಲ್ಲ | ಪತ್ನಿ ಮೇಘಾ ಆತಂಕ

ಬುರ್ಖಾ ಧರಿಸಿದವರಿಗೆ ಥಳಿತ: ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದ ಅಸಲಿಯತ್ತು ಬಯಲು

ಇತ್ತೀಚಿನ ಸುದ್ದಿ