ಶಾಲು ಮಾರಾಟಗಾರರಿಗೆ ವ್ಯಾಪಾರ ಮಾಡದಂತೆ ಹಿಂದೂತ್ವ ಗುಂಪುಗಳಿಂದ ಕಿರುಕುಳ - Mahanayaka
9:17 AM Wednesday 20 - August 2025

ಶಾಲು ಮಾರಾಟಗಾರರಿಗೆ ವ್ಯಾಪಾರ ಮಾಡದಂತೆ ಹಿಂದೂತ್ವ ಗುಂಪುಗಳಿಂದ ಕಿರುಕುಳ

28/12/2024


Provided by

ಜಮ್ಮು ಮತ್ತು ಕಾಶ್ಮೀರದ ಸುಮಾರು ಎರಡು ಡಜನ್ ನಷ್ಟು ಬಡ ಶಾಲು ಮಾರಾಟಗಾರರಿಗೆ ಹಿಮಾಚಲ ಪ್ರದೇಶದ ಬಿಲಾಸ್‌ಪುರದಲ್ಲಿ ಸ್ಥಳೀಯ ಹಿಂದುತ್ವ ಗುಂಪುಗಳು ವ್ಯಾಪಾರ ಮಾಡದಂತೆ ಮತ್ತು ಈ ಪ್ರದೇಶವನ್ನು ಬಿಟ್ಟು ಕಾಶ್ಮೀರಕ್ಕೆ ಹಿಂತಿರುಗುವಂತೆ ಕಿರುಕುಳ ನೀಡಿದ್ದಾರೆ.

ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಕಾಶ್ಮೀರದ ಶಾಲು ಮಾರಾಟಗಾರರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಕೇಳಿಕೊಂಡಿದ್ದಾರೆ.

ಈ ಅಸಹಾಯಕ ಶಾಲು ಮಾರಾಟಗಾರರು ಸಂಭಾವ್ಯ ಗ್ರಾಹಕರನ್ನು ತಲುಪಲು ಹೋದರೆ ತಮ್ಮ ಸರಕುಗಳನ್ನು ಸ್ಥಳೀಯ ಹಿಂದುತ್ವ ಗುಂಪುಗಳಿಂದ ವಶಪಡಿಸಿಕೊಳ್ಳಲಾಗುತ್ತದೆ ಎಂಬ ಭಯದಿಂದ ಒಂದೇ ಸ್ಥಳದಲ್ಲಿ ಕುಳಿತಿದ್ದಾರೆ.

ಬಿಲಾಸ್‌ಪುರದಲ್ಲಿ ಸ್ಥಳೀಯ ಹಿಂದುತ್ವ ಗುಂಪುಗಳಿಂದ ಕಾಶ್ಮೀರಿ ಮಾರಾಟಗಾರರು ಎದುರಿಸುತ್ತಿರುವ ದೌರ್ಜನ್ಯದ ಬಗ್ಗೆ ಸುಖ್ವಿಂದರ್ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ರ ಗಮನವನ್ನು ಸೆಳೆಯಲು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಾಮಾಜಿಕ ಮಾಧ್ಯಮದಲ್ಲಿ ಮನವಿ ಮಾಡಿದ್ದಾರೆ. ಈ ವ್ಯಾಪಾರಿಗಳಿಗೆ ಸುರಕ್ಷಿತ ವಾತಾವರಣವನ್ನು ಖಚಿತಪಡಿಸುವಂತೆ ಸುಖ್ವಿಂದರ್ ಸಿಂಗ್ ರನ್ನು ಕೇಳಿದ್ದಾರೆ.

ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿ ಕಾಶ್ಮೀರಿ ಶಾಲು ಮಾರಾಟಗಾರರು ಹಿಂದುತ್ವ ಗುಂಪುಗಳಿಂದ ಕಿರುಕುಳ, ಹಲ್ಲೆ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ. ಇದು ಈ ರಾಜ್ಯದಲ್ಲಿ ನಡೆದ ಮೂರನೇ ಘಟನೆಯಾಗಿದ್ದು, ಉದ್ದೇಶಪೂರ್ವಕ ಕಿರುಕುಳವು ಆತಂಕಕಾರಿಯಾಗಿದೆ ಎಂದು ಮುಫ್ತಿ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಕಾಶ್ಮೀರಿ ಮಾರಾಟಗಾರರೊಬ್ಬರು, ನಾವು 3-4 ದಿನಗಳ ಕಾಲ ಇಲ್ಲಿ ಒಂದೇ ಕಡೆ ಕುಳಿತಿದ್ದೇವೆ. ನಮಗೆ ಕಿರುಕುಳ ನೀಡಲಾಗುತ್ತಿದೆ. ನಾವು ನಮ್ಮ ಸರಕುಗಳನ್ನು ಮಾರಾಟ ಮಾಡಲು ಬಸ್ ನಿಲ್ದಾಣಕ್ಕೆ ಹೋದಾಗ, ಅವಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ನಮಗೆ ವ್ಯಾಪಾರ ಮಾಡಲು ಬಿಡುತ್ತಿಲ್ಲ. ನಾವು ಆ ಪ್ರದೇಶದಿಂದ ದೂರ ಹೋಗಲು ಮತ್ತು ಕಾಶ್ಮೀರಕ್ಕೆ ಹಿಂತಿರುಗುವಂತೆ ಒತ್ತಾಯಿಸಲಾಗುತ್ತಿದೆ ಎಂದು ಆಳಲು ತೊಡಿಕೊಂಡಿದ್ದಾನೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ