ಹಿತೇಶಾಳ ನವರಂಗಿ ಆಟ ಬಯಲು | ಹಿತೇಶಾ ರೂಮ್ ಮೇಟ್ ಹೇಳಿದ್ದೇನು ಗೊತ್ತಾ? - Mahanayaka
5:51 PM Thursday 16 - October 2025

ಹಿತೇಶಾಳ ನವರಂಗಿ ಆಟ ಬಯಲು | ಹಿತೇಶಾ ರೂಮ್ ಮೇಟ್ ಹೇಳಿದ್ದೇನು ಗೊತ್ತಾ?

hitesha chandranee
21/03/2021

ಬೆಂಗಳೂರು: ಝೊಮೆಟೋ ಫುಡ್ ಡೆಲಿವರಿ ಬಾಯ್ ತನಗೆ ಹಲ್ಲೆ ನಡೆಸಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ದೇಶಾದ್ಯಂತ ಸುದ್ದಿ ಮಾಡಿದ್ದ ಹಿತೇಶಾ ಚಂದ್ರಾನೀಯ ಅಸಲಿಯತ್ತು ಇದೀಗ ಬಯಲಾಗಿದೆ.


Provided by

ಹಿತೇಶಾ ಚಂದ್ರಾನೀ ಜೊತೆಗೆ  ಈ ಹಿಂದೆ ರೂಮ್ ವೊಂದರಲ್ಲಿ ವಾಸಿಸುತ್ತಿದ್ದ ಆಕೆಯ ಮಾಜಿ ಸ್ನೇಹಿತರೊಬ್ಬರು ಹಿತೇಶಾಳ ಬಣ್ಣ ಬಯಲು ಮಾಡಿದ್ದಾರೆ. ಈ ಘಟನೆಯಲ್ಲಿ ಹಿತೇಶಾ ಅವರ ತಪ್ಪಿದೆ ಎಂದು ಅವರು ಹೇಳಿದ್ದಾರೆ.

ಈ ಹಿಂದಿನಿಂದಲೂ ಹಿತೇಶಾಗೆ ಉಚಿತವಾಗಿ ಆಹಾರ ಪಡೆದುಕೊಳ್ಳುವ ಶೋಕಿ ಇತ್ತಂತೆ. ಪ್ರತಿ ಬಾರಿಯೂ ಊಟ ಆರ್ಡರ್ ಮಾಡಿದ ಬಳಿಕ ಸಾಮಾನ್ಯವಾಗಿ ತಡವಾಗಿಯೇ ಆಹಾರ ತೆಗೆದುಕೊಂಡು ಬರುತ್ತಾರೆ ಎನ್ನುವುದು ಆಕೆಗೆ ತಿಳಿದಿರುತ್ತದೆ. ಡೆಲಿವರಿ ಬಾಯ್ ಗಳು ಬಂದ ತಕ್ಷಣವೇ ಈಕೆ ಆಹಾರ ಪಡೆದುಕೊಂಡು ಬಾಯಿಗೆ ಬಂದಂತೆ ಅವರನ್ನು ನಿಂದಿಸಿ ಹಣ ಕೊಡದೇ ವಾಪಸ್ ಕಳುಹಿಸುತ್ತಿದ್ದಳು ಎಂದು ಆಕೆಯ ಮಾಜಿ ರೂಮ್ ಮೇಟ್ ಹೇಳಿದ್ದಾರೆ.

ಹಿತೇಶಾ ವಿಚಾರವಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವನ್ನು ಹಿತೇಶಾ ಮಾಜಿ ರೂಮ್ ಮೇಟ್ ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ. ಹಿತೇಶಾ ಸುಮಾರು 3 ವರ್ಷಗಳಿಂದ ತನಗೆ ರೂಮ್ ಮೇಟ್ ಆಗಿದ್ದಳು ಎಂದು ಅವರು ಹೇಳಿದ್ದಾರೆ. ಪಿಜ್ಜಾ ಆರ್ಡರ್ ಮಾಡಿ, ಬಳಿಕ ಡೆಲಿವರಿ ಬಾಯ್ ಗಳಿಗೆ ಬಾಯಿಗೆ ಬಂದಂತೆ ಬೈದು ಹಣಕೊಡದೇ ಕಳುಹಿಸುತ್ತಿದ್ದಳು ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ