ಕೇಜ್ರಿವಾಲ್ ಬಂಧನ ಪ್ರಕರಣ: ನಾಗರಿಕ ಹಕ್ಕುಗಳ ರಕ್ಷಣೆ ಅಗತ್ಯ ಎಂದ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ - Mahanayaka
12:47 PM Tuesday 20 - January 2026

ಕೇಜ್ರಿವಾಲ್ ಬಂಧನ ಪ್ರಕರಣ: ನಾಗರಿಕ ಹಕ್ಕುಗಳ ರಕ್ಷಣೆ ಅಗತ್ಯ ಎಂದ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ

29/03/2024

ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರ ಬಂಧನದ ಕುರಿತು ಅಮೆರಿಕಾ ಮತ್ತು ಜರ್ಮನಿಯ ಹೇಳಿಕೆಗಳಿಂದ ಉದ್ಭವಿಸಿರುವ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ಪ್ರತಿಕ್ರಿಯಿಸಿರುವ ವಿಶ್ವ ಸಂಸ್ಥೆಯ ಮಹಾ ಕಾರ್ಯದರ್ಶಿ ಆಂಟೋನಿಯೋ ಗುಟರೆಸ್ ರ ವಕ್ತಾರೆ ಸ್ಟಿಫಾನಿ ದುಜರ್ರಿಕ್, ಚುನಾವಣೆಗಳು ನಡೆಯಲಿರುವ ಭಾರತ ಅಥವಾ ಯಾವುದೇ ದೇಶದಲ್ಲಿ ಜನರ ರಾಜಕೀಯ ಮತ್ತು ನಾಗರಿಕ ಹಕ್ಕುಗಳನ್ನು ರಕ್ಷಿಸಲಾಗುವುದು ಎಂದು ತಾವು ಬಹಳಷ್ಟು ನಿರೀಕ್ಷಿಸುವುದಾಗಿ ಹೇಳಿದ್ದಾರೆ.

ಕೇಜ್ರಿವಾಲ್ ರನ್ನು ಈಡಿ ಬಂಧಿಸಿರುವುದು ಹಾಗೂ ಪ್ರಮುಖ ವಿಪಕ್ಷವಾದ ಕಾಂಗ್ರೆಸ್‌ನ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಕುರಿತ ಪ್ರಶ್ನೆಗಳಿಗೆ ಅವರು ಈ ರೀತಿ ಉತ್ತರಿಸಿದರು.

“ಚುನಾವಣೆ ನಡೆಯುವ ಯಾವುದೇ ದೇಶದಂತೆ ಭಾರತದಲ್ಲೂ ರಾಜಕೀಯ ಮತ್ತು ನಾಗರಿಕ ಹಕ್ಕುಗಳು ಸೇರಿದಂತೆ ಎಲ್ಲರ ಹಕ್ಕುಗಳನ್ನು ರಕ್ಷಿಸಲಾಗುವುದು. ಎಲ್ಲರೂ ಸ್ವತಂತ್ರ ಮತ್ತು ನ್ಯಾಯಯುತ ವಾತಾವರಣದಲ್ಲಿ ಮತದಾನ ಮಾಡಲು ಸಾಧ್ಯವಾಗಬೇಕೆಂದು ಆಶಿಸುತ್ತೇವೆ,” ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಬುಧವಾರ, ಕೇಜ್ರಿವಾಲ್ ಅವರ ಬಂಧನದ ಕುರಿತು ಟೀಕೆಗಳನ್ನು ಪ್ರತಿಭಟಿಸಲು ಭಾರತವು ಅಮೆರಿಕದ ಹಿರಿಯ ರಾಯಭಾರಿಯನ್ನು ಕರೆಸಿದ ಕೆಲವೇ ಗಂಟೆಗಳ ನಂತರ, ವಾಷಿಂಗ್ಟನ್ ನ್ಯಾಯಯುತ, ಪಾರದರ್ಶಕ, ಸಮಯೋಚಿತ ಕಾನೂನು ಪ್ರಕ್ರಿಯೆಗಳನ್ನು ಉತ್ತೇಜಿಸುವ ತನ್ನ ಹೇಳಿಕೆಗೆ ಬದ್ಧ ಎಂದು ಪುನರುಚ್ಚರಿಸಿತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ