ಕೌತುಕ: ಅಬ್ಬಬ್ಬಾ ಈ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 31 ಮಕ್ಕಳ ಜನನ..! - Mahanayaka

ಕೌತುಕ: ಅಬ್ಬಬ್ಬಾ ಈ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 31 ಮಕ್ಕಳ ಜನನ..!

22/08/2023


Provided by

ಓರ್ವ ತಾಯಿ ಒಂದಕ್ಕಿಂತ ಹೆಚ್ಚು ಮಕ್ಕಳನ್ನು ಹೆರುವ ಘಟನೆ ಈ ಹಿಂದೆ ನಡೆದಿತ್ತು. ಆದರೆ ಒಂದೇ ಆಸ್ಪತ್ರೆಯಲ್ಲಿ ಒಂದೇ ದಿನ 31 ಮಕ್ಕಳು ಹುಟ್ಟುವುದು ಅಂದ್ರೆ ಅಚ್ಚರಿಯಾಗುತ್ತೆ, ಅಲ್ವಾ..? ಸೂರತ್‌ನ ಡೈಮಂಡ್‌ ಆಸ್ಪತ್ರೆಯಲ್ಲಿ ಬರೋಬ್ಬರಿ 24 ಗಂಟೆಯಲ್ಲಿ 31 ಮಕ್ಕಳು ಜನಿಸಿದ್ದಾರೆ. ಈ ಮೂಲಕ ಆಸ್ಪತ್ರೆ ದಾಖಲೆ ನಿರ್ಮಿಸಿದೆ.

ಒಂದೇ ದಿನದಲ್ಲಿ ಈ ಆಸ್ಪತ್ರೆಯಲ್ಲಿ 17 ಹೆಣ್ಣು ಶಿಶು, 14 ಗಂಡು ಶಿಶುಗಳು ಜನಿಸಿದೆ. ಈ ಎಲ್ಲಾ ಮಕ್ಕಳು ಆರೋಗ್ಯವಾಗಿವೆ ಎಂದು ಆಸ್ಪತ್ರೆ ವೈದ್ಯರು ಸಂತಸ ವ್ಯಕ್ತಪಡಿಸಿದ್ದಾರೆ. ಸೂರತ್‌ನ ಡೈಮಂಡ್‌ ಅಸೋಸಿಯೇಶನ್‌ ಆರೋಗ್ಯ ಸಮಿತಿ ಅಡಿಯಲ್ಲಿರುವ ಈ ಆಸ್ಪತ್ರೆ ಡೈಮಂಡ್‌ ಕೆಲಸಗಾರರು ಹಾಗೂ ಅವರ ಕುಟುಂಬಸ್ಥರಿಗಾಗಿ ವಿಶೇಷ ಆರೋಗ್ಯ ಸೇವೆಯನ್ನು ಕಳೆದ 10 ವರ್ಷಗಿಂದ ನೀಡುತ್ತಿದೆ. ಈ ಹಿಂದೆ ಜುಲೈ 2022ರಲ್ಲಿ ಈ ಆಸ್ಪತ್ರೆಯಲ್ಲಿ 23 ಮಕ್ಕಳು ಒಂದೇ ದಿನದಲ್ಲಿ ಜನಿಸಿದ್ದು ಮೆಚ್ಚುಗೆ ಪಡೆದುಕೊಂಡಿತ್ತು.

ಈ ಆಸ್ಪತ್ರೆಯಲ್ಲಿ ಹೆಣ್ಣು ಶಿಶು ಜನಿಸಿದರೆ ಯಾವುದೇ ಬಿಲ್‌ ಕಟ್ಟಬೇಕಾಗಿಲ್ಲ. ನಾರ್ಮಲ್‌ ಡೆಲಿವರಿಗೆ 1800 ರೂಪಾಯಿ ಹಾಗೂ ಸಿಸೆರಿಯನ್‌ಗೆ 5000 ರೂಪಾಯಿ ಶುಲ್ಕವನ್ನು ಮಾತ್ರ ತೆಗೆದುಕೊಂಡು ಡೈಮಂಡ್‌ ಕೆಲಸಗಾರರಿಗೆ ನೆರವಾಗುತ್ತಿದೆ. ಜೊತೆಗೆ ಎರಡನೇ ಮಗು ಕೂಡ ಹೆಣ್ಣು ಶಿಶು ಆದರೆ ಆ ಮಗುವಿಗೆ 1 ಲಕ್ಷದ ಬಾಂಡ್‌ ನೀಡಿ ಬೇಟಿ ಬಚಾವೋ ಆಂದೋಲನಕ್ಕೆ ಬೆಂಬಲ ನೀಡುತ್ತಿದೆ. ಇಲ್ಲಿವರೆಗೆ ಈ ಆಸ್ಪತ್ರೆ 2000 ಹೆಣ್ಣು ಶಿಶುಗಳಿಗೆ ಒಟ್ಟು 20 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ ವಿತರಿಸಿದೆ.

ಇತ್ತೀಚಿನ ಸುದ್ದಿ