ಉರಿಯುತ್ತಿರುವ ಕಸದ ತೊಟ್ಟಿಗೆ ಮೃತಪಟ್ಟ ಶಿಶುವನ್ನು ಎಸೆದ ಆಸ್ಪತ್ರೆ ಸಿಬ್ಬಂದಿ..!

ಪ್ರಸವ ಸಂದರ್ಭ ಮೃತಪಟ್ಟ ಶಿಶುವನ್ನು ಅದರ ಕುಟುಂಬಕ್ಕೆ ಹಸ್ತಾಂತರಿಸದೆ ಆಸ್ಪತ್ರೆ ಸಿಬ್ಬಂದಿ ಉರಿಯುತ್ತಿರುವ ಕಸದ ತೊಟ್ಟಿಗೆ ಎಸೆದು ಸುಟ್ಟು ಹಾಕಿದ ಘಟನೆ ರಾಂಚಿಯ ಗರವಾದ ಮಾಝಿಯಾನ್ ರೆಫರಲ್ ಆಸ್ಪತ್ರೆಯಲ್ಲಿ ನಡೆದಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಕುಟುಂಬ ಮಂದಿ, ‘ನಾವು ಶಿಶುವಿನ ಅಂತಿಮ ವಿಧಿ ವಿಧಾನ ನೆರವೇರಿಸಲು ಬಟ್ಟೆ ತರಲು ಮಾರುಕಟ್ಟೆಗೆ ಹೋಗಿದ್ದೆವು. ಇದೇ ವೇಳೆ ಆಸ್ಪತ್ರೆಯ ಸಿಬ್ಬಂದಿ ಶಿಶುವಿನ ಮೃತದೇಹವನ್ನು ಉರಿಯುತ್ತಿರುವ ಕಸದ ತೊಟ್ಟಿಗೆ ಎಸೆದಿದ್ದಾರೆ. ಶಿಶು ಜನಿಸಿದ ಗಂಟೆಗಳ ಬಳಿಕ ಈ ಘಟನೆ ನಡೆದಿದೆ’ ಎಂದಿದೆ.
‘ನಾನು ನನ್ನ ಗರ್ಭಿಣಿ ಮಗಳು ಮಧು ದೇವಿಯನ್ನು ಮೊನ್ನೆ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದೆ. ಒಂದೂವರೆ ಗಂಟೆಗಳ ಬಳಿಕ ಪ್ರಸವದ ಸಂದರ್ಭ ಶಿಶು ಮೃತಪಟ್ಟಿತ್ತು. ಆದರೆ, ಆಸ್ಪತ್ರೆಯ ಸಿಬ್ಬಂದಿ ದೌಲತ್ ದೇವಿಯವರೊಂದಿಗೆ ನಿರ್ಮಲಾ ಕುಮಾರಿ ಹಾಗೂ ಮಂಜು ಕುಮಾರಿ ಸೇರಿ ಶಿಶುವಿನ ಮೃತದೇಹವನ್ನು ಆಸ್ಪತ್ರೆಯ ಕ್ಯಾಂಪಸ್ ನಲ್ಲಿರುವ ಕಸದ ತೊಟ್ಟಿಗೆ ಎಸೆದಿದ್ದಾರೆ.
ಇದೇ ವೇಳೆ ಕಸದ ತೊಟ್ಟಿಯಲ್ಲಿ ಬೆಂಕಿ ಉರಿಯುತ್ತಿತ್ತು. ಶಿಶುವಿನ ಮೃತದೇಹ ಕಸದೊಂದಿಗೆ ಸುಟ್ಟು ಬೂದಿಯಾಯಿತು ಎಂದು ಶಿಶುವಿನ ಅಜ್ಜಿ ರಾಜಮತಿ ದೇವಿ ಕಣ್ಣೀರು ಹಾಕಿದ್ದಾರೆ.
ಈ ಘಟನೆ ಕುರಿತಂತೆ ಸಂತಾಪ ವ್ಯಕ್ತಪಡಿಸಿರುವ ಗರವಾ ಸಿವಿಲ್ ಸರ್ಜನ್ ಅನಿಲ್ ಸಿಂಗ್, ಆಸ್ಪತ್ರೆಯ ಸಿಬ್ಬಂದಿಯ ವರ್ತನೆಯನ್ನು ಅಮಾನವೀಯ ಎಂದು ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸಿವಿಲ್ ಸರ್ಜನ್ ಡಾ. ಅನಿಲ್ ಸಿಂಗ್, ನಿಸ್ಸಂಶಯವಾಗಿ ಇದು ಅಮಾನವೀಯ ಕೃತ್ಯವಾಗಿದೆ. ಈ ಘೋರ ಕೃತ್ಯದಲ್ಲಿ ಭಾಗಿಯಾದವರನ್ನು ಸುಮ್ಮನೆ ಬಿಡುವುದಿಲ್ಲ. ಇದರಲ್ಲಿ ಭಾಗಿಯಾದವರ ವಿರುದ್ಧ ಎಫ್ಐಆರ್ ದಾಖಲಿಸಲಾಗುವುದು ಹಾಗೂ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’ ಎಂದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw