ದುಡುಕಿನ ನಿರ್ಧಾರ ತೆಗೆದುಕೊಂಡ ಹೊಟೇಲ್ ಕಾರ್ಮಿಕ: ಅಡುಗೆ ಮನೆಯಲ್ಲೇ ಸಾವಿಗೆ ಶರಣು - Mahanayaka

ದುಡುಕಿನ ನಿರ್ಧಾರ ತೆಗೆದುಕೊಂಡ ಹೊಟೇಲ್ ಕಾರ್ಮಿಕ: ಅಡುಗೆ ಮನೆಯಲ್ಲೇ ಸಾವಿಗೆ ಶರಣು

death
23/01/2023

ಬೆಳ್ತಂಗಡಿ : ಹೊಟೇಲ್ ಕಾರ್ಮಿಕನೋರ್ವ ಹೊಟೇಲಿನ ಅಡುಗೆ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜ.22ರಂದು ಬೆಳ್ತಂಗಡಿ ನಗರದ ಸಂತೆಕಟ್ಟೆ ಎಂಬಲ್ಲಿ ನಡೆದಿದೆ.

ಮೃತರನ್ನು ಬೆಳ್ತಂಗಡಿಯ ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ಎಂಬ ಹೆಸರಿನ ಹೊಟೇಲಿನಲ್ಲಿ ಅಡುಗೆ ಕೆಲಸಕ್ಕಿದ್ದ ಬಂಟ್ವಾಳ ತಾಲೂಕಿನ ಸಿದ್ದಕಟ್ಟೆ ನಿವಾಸಿ ಜನಾರ್ಧನ್ ಶೆಟ್ಟಿಗಾರ್ (48) ಎಂದು ಗುರುತಿಸಲಾಗಿದೆ.

ಇವರು ಹೊಟೇಲ್ ನ ರೂಂನಲ್ಲಿ ವಾಸವಿದ್ದು, ಎರಡು ವಾರಕ್ಕೊಮ್ಮೆ ಮನೆಗೆ ಹೋಗಿ ಬರುತ್ತಿದ್ದು, ಜ.22ರಂದು ಭಾನುವಾರವಾಗಿದ್ದ ಕಾರಣ ಹೊಟೇಲ್ ಗೆ ರಜೆ ಇದ್ದು ಸಂಜೆ ವೇಳೆ ಮಾಲೀಕರು ಜನಾರ್ಧನ್ ಶೆಟ್ಟಿಗಾರ್ ಅವರಿಗೆ ಕರೆ ಮಾಡಿ ಸೋಮವಾರಕ್ಕೆ ಬೇಕಾಗುವ ಅಡುಗೆ ಸಾಮಾನು ತಂದಿಡಲು ಹೇಳಿದ್ದರು ಅದರಂತೆ ಸಾಮಾನು ತಂದು ನಂತರ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದಾರೆ.


Provided by

ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ತನಿಖೆಯ ಬಳಿಕವಷ್ಟೇ ಜನಾರ್ಧನ್‌ರವರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿಯಬೇಕಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ