ಹೋಟೆಲ್ ದುರ್ಗಾ ಇಂಟರ್‌ ನ್ಯಾಷನಲ್‌ ನಲ್ಲಿ ವೇಶ್ಯಾವಾಟಿಕೆ | ಮೂವರ ಬಂಧನ - Mahanayaka
6:00 AM Wednesday 20 - August 2025

ಹೋಟೆಲ್ ದುರ್ಗಾ ಇಂಟರ್‌ ನ್ಯಾಷನಲ್‌ ನಲ್ಲಿ ವೇಶ್ಯಾವಾಟಿಕೆ | ಮೂವರ ಬಂಧನ

hotel international
18/03/2021


Provided by

ಉಡುಪಿ: ವೇಶ್ಯಾವಾಟಿಕೆ ದಂಧೆಯೊಂದನ್ನು ಪತ್ತೆ ಹಚ್ಚಿರುವ ಪೊಲೀಸರು  ಮೂವರು ಪುರುಷರನ್ನು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಸಿಟಿ ಬಸ್ ನಿಲ್ದಾಣದ ರಸ್ತೆಯಲ್ಲಿರುವ ಹೋಟೆಲ್ ದುರ್ಗಾ ಇಂಟರ್‌ ನ್ಯಾಷನಲ್‌ ನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿರುವುದು ಬೆಳಕಿಗೆ ಬಂದಿದೆ.

ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಲ್ಲಿ ಶೇಖರ್ ಶೆಟ್ಟಿ, ಜಾನ್ಸನ್ ಅಲ್ಮೇಡಾ ಮತ್ತು ಹರ್ಷಿತ್ ಶೆಟ್ಟಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಮಹಿಳೆಯರನ್ನು ರಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾಡ್ಜ್ ದಿವಂಗತ ಭಾಸ್ಕರ್ ಶೆಟ್ಟಿಯವರ ಪತ್ನಿ ರಾಜೇಶ್ವರಿ ಶೆಟ್ಟಿಗೆ ಸೇರಿದೆ. ಆಕೆಯ ಮೇಲೂ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ