ಹೊಟೇಲ್ ನಿಂದ ಖರೀದಿಸಿದ ಆಹಾರದಲ್ಲಿ ಹಾವಿನ ಚರ್ಮ ಪತ್ತೆ! - Mahanayaka

ಹೊಟೇಲ್ ನಿಂದ ಖರೀದಿಸಿದ ಆಹಾರದಲ್ಲಿ ಹಾವಿನ ಚರ್ಮ ಪತ್ತೆ!

food
06/05/2022


Provided by

ತಿರುವನಂತಪುರಂ: ತಿರುವನಂತಪುರದ ಹೊಟೇಲ್‌ ನಿಂದ ಖರೀದಿಸಿದ ಆಹಾರ ಪೊಟ್ಟಣದಲ್ಲಿ ಹಾವಿನ ಚರ್ಮ ಪತ್ತೆಯಾಗಿರುವ ಘಟನೆ ನಡೆಸಿದ್ದು, ಇಲ್ಲಿನ ನೆಡುಮಂಗಾಡ್ ಶಾಲಿಮಾರ್ ಹೋಟೆಲ್‌ ನಿಂದ ಖರೀದಿಸಿದ ಆಹಾರದ ಪೊಟ್ಟಣದಲ್ಲಿ ಹಾವಿನ ಚರ್ಮ ಬಿದ್ದಿತ್ತು ಎನ್ನಲಾಗಿದೆ.

ನೆಡುಮಂಗಾಡ್ ,ಪೂವತ್ತೂರು, ಚೆಲ್ಲಂಕೋಡ್ ನಿವಾಸಿ ಪ್ರಿಯಾ ಅವರು ತಮ್ಮ ಮಗಳಿಗೆ ಆಹಾರ ಪಾರ್ಸೆಲ್ ಖರೀದಿಸಿದ್ದಾರೆ.   ಮಗಳು ಪ್ರಿಯಾ ಊಟ ಮಾಡುತ್ತಿದ್ದ ವೇಳೆ ಪೊಟ್ಟಣದಲ್ಲಿ ಹಾವಿನ ಚರ್ಮ ಇರುವುದು ಪತ್ತೆಯಾಗಿದೆ.

ತಕ್ಷಣವೇ ಪೊಲೀಸರಿಗೆ ಹಾಗೂ ನೆಡುಮಂಗಡ ಪುರಸಭೆಗೆ ಅವರು ಮಾಹಿತಿ ನೀಡಿದ್ದು, ಈ ದೂರಿನನ್ವಯ ತಕ್ಷಣವೇ ಸ್ಥಳಕ್ಕೆ ಆಗಮಿಸಿದ  ನೆಡುಮಂಗಾಡ್ ಪುರಸಭಾ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಆಹಾರ ಮತ್ತು ಸುರಕ್ಷತಾ ಅಧಿಕಾರಿಗಳು ಹೋಟೆಲ್ ಗೆ ಬೀಗ ಜಡಿದಿದ್ದಾರೆ.

ಹಾವಿನ ಹೊರ ಮೇಲ್ಮೈಯಲ್ಲಿರುವ ಚರ್ಮವು ಕಾಗದಕ್ಕೆ ಅಂಟಿಕೊಂಡಿರಬಹುದು ಎಂದು ಅಧಿಕಾರಿಗಳು ಪ್ರಾಥಮಿಕ ವರದಿ ನೀಡಿದ್ದಾರೆ.  ಹೊಟೇಲ್ ಶುಚಿಗೊಳಿಸಿದ ನಂತರ ಪಾಲಿಕೆಯ ಅನುಮತಿ ಪಡೆದು ಮಾತ್ರ ತೆರೆಯುವಂತೆ ಸದ್ಯ ಸೂಚನೆ ನೀಡಲಾಗಿದೆ.

ಹೊಟೇಲ್ ಅಥವಾ ಯಾವುದೇ ಹೊರಗಿನ ಆಹಾರವನ್ನು ಸೇವಿಸುವ ಮುನ್ನ ಸಾರ್ವಜನಿಕರು ಮೊದಲು ಆಹಾರವನ್ನು ಸರಿಯಾಗಿ ಪರೀಲಿಸಿ ಬಳಿಕ ಸೇವಿಸುವುದು ಉತ್ತಮ. ಇತ್ತೀಚೆಗೆ  ಅಸುರಕ್ಷಿತ ಆಹಾರ ಜನರನ್ನು ಆತಂಕಕ್ಕೀಡು ಮಾಡಿದ್ದು,  ಪ್ರತೀ ಹೊಟೇಲ್ ಗಳಲ್ಲಿಯೂ ಆಹಾರ ಸುರಕ್ಷತಾ ಅಧಿಕಾರಿಗಳು ಪ್ರತಿವಾರ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡಬೇಕಿದೆ. ಈ ಮೂಲಕ ಆಹಾರ ಸುರಕ್ಷತೆಗೆ  ಎಲ್ಲ ಸರ್ಕಾರಗಳು ಒತ್ತು ನೀಡಬೇಕಿದೆ ಎನ್ನುವ ಒತ್ತಾಯಗಳು ಘಟನೆಯ ಬೆನ್ನಲ್ಲೇ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಭೀಕರ ಅಪಘಾತ: ಇಬ್ಬರ ದಾರುಣ ಸಾವು

ಸೆಖೆಯಿಂದ ತಪ್ಪಿಸಿಕೊಳ್ಳಲು ಆಟೋದ ಮೇಲೆಯೇ ಗಿಡ ನೆಟ್ಟ ಆಟೋ ಚಾಲಕ

ಗ್ರಾಹಕರಿಗೆ ಶಾಕ್ ನೀಡಲಿರುವ ಬ್ರಿಟಾನಿಯಾ:  ಬಿಸ್ಕೆಟ್ ಗಳ ಬೆಲೆ ಹೆಚ್ಚಾಗಲಿದೆಯೇ?

ಕಿನ್ಯಾ ಗ್ರಾಮ ಪಂಚಾಯತ್ ನಿಂದ ದಲಿತರ ಕಡೆಗಣನೆ: ಪಂಚಾಯತ್ ಕಚೇರಿಯೆದುರು ಪ್ರತಿಭಟನೆ 

ಇತ್ತೀಚಿನ ಸುದ್ದಿ