ಸರ್ಕಾರಿ ನೌಕರರ ಹೊಟ್ಟೆಯ ಬಗ್ಗೆ ಸಚಿವ ಈಶ್ವರಪ್ಪ ಹೇಳಿದ್ದೇನು ಗೊತ್ತಾ? - Mahanayaka
11:53 PM Tuesday 21 - October 2025

ಸರ್ಕಾರಿ ನೌಕರರ ಹೊಟ್ಟೆಯ ಬಗ್ಗೆ ಸಚಿವ ಈಶ್ವರಪ್ಪ ಹೇಳಿದ್ದೇನು ಗೊತ್ತಾ?

08/02/2021

ಶಿವಮೊಗ್ಗ:  ಸರ್ಕಾರಿ  ನೌಕರರು ತಮ್ಮ ಹೊಟ್ಟೆಯ ಮೇಲೆ ಕೂಡ ಗಮನ ನೀಡಬೇಕು ಎಂದು ಸಚಿವ ಈಶ್ವರಪ್ಪ ಕಿವಿಮಾತು ಹೇಳಿದ್ದು, ಸರ್ಕಾರಿ ನೌಕರರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ.

ಶಿವಮೊಗ್ಗದಲ್ಲಿ ಇಂದು ಸರ್ಕಾರಿ ಜಿಲ್ಲಾ ನೌಕರರ ಕ್ರೀಡಾಕೂಡವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಸರ್ಕಾರಿ ನೌಕರರು ಸದಾ ಕೆಲಸದಲ್ಲಿ ಬ್ಯುಸಿಯಾಗಿರುತ್ತಾರೆ. ಹಾಗಾಗಿ ಅವರು ಆರೋಗ್ಯದ ಕಡೆಗೆ ಗಮನ ಹರಿಸುವುದಿಲ್ಲ. ಬೆಳಗ್ಗಿನಿಂದ ಸಂಜೆಯ ವರೆಗೆ ಕೆಲಸ ಮಾಡುವುದರಿಂದಾಗಿ ಹೊಟ್ಟೆ ಬೆಳೆಸಿಕೊಂಡಿರುತ್ತಾರೆ ಎಂದು ಹೇಳಿದರು.

ಸರ್ಕಾರಿ ನೌಕರರು ಹೊಟ್ಟೆ ಬೆಳೆಸುವುದನ್ನು ಬಿಟ್ಟು ವ್ಯಾಯಾಮ ಮಾಡುವ ಮೂಲಕ ಆರೋಗ್ಯದಲ್ಲಿ ಫಿಟ್ ಆಗಬೇಕು.  ನಿಮ್ಮ ಕುಟುಂಬಕ್ಕಾಗಿ ನೀವು ಆರೋಗ್ಯವಂತರಾಗಿರಬೇಕು ಎಂದು ಸಲಹೆ ನೀಡಿದರು.

ಇತ್ತೀಚಿನ ಸುದ್ದಿ