ಕೆಂಪು ಸುಂದರಿಯನ್ನ ರೈತರು ಹೇಗೆ ನಂಬೋದು?: ಮಾರ್ಕೆಟ್ ನ್ನ ಶೇಕ್ ಮಾಡಿದ್ದ ಟೊಮೇಟೋ ಬೆಲೆ ಪಾತಾಳಕ್ಕೆ!

ಕೋಲಾರ: ಮಾರ್ಕೆಟ್ ನ್ನು ಶೇಕ್ ಮಾಡಿದ್ದ ಟೊಮೇಟೊ ಬೆಲೆ ಇದೀಗ ಬೆಲೆ ಇದೀಗ ಪಾತಾಳಕ್ಕೆ ಇಳಿದಿದೆ. 1 ಕೆ.ಜಿ. ಟೊಮೇಟೊ ಬೆಲೆ 150ರಿಂದ 230ರವರೆಗೆ ಏರಿಕೆಯಾಗಿತ್ತು. ಒಂದು ಹಂತದಲ್ಲಿ ಆ್ಯಪಲ್ ಗಿಂತಲೂ ದುಬಾರಿ ಎನಿಸಿತ್ತು. ಇದೀಗ 12ರಿಂದ 15 ರೂಪಾಯಿಗೆ ಟೊಮೇಟೊ ಬೆಲೆ ಇಳಿಕೆಯಾಗಿದೆ.
ಜುಲೈ ಕೊನೆಯ ವಾರದಲ್ಲಿ 15 ಕೆ.ಜಿ. ತೂಕದ ಬಾಕ್ಸ್ ಟೊಮೇಟೊ 2700 ರೂಪಾಯಿ ದಾಖಲೆಯ ಬೆಲೆಗೆ ಮಾರಾಟವಾಗುತ್ತಿತ್ತು. ಈಗ ಕೇವಲ 100ರಿಂದ 230 ರೂಪಾಯಿಗೆ 15 ಕೆ.ಜಿ.ಯ ಬಾಕ್ಸ್ ಹರಾಜಾಗುತ್ತಿದೆ.
ಕೋಲಾರ ಎಪಿಎಂಸಿ ಮಾರುಕಟ್ಟೆಯಿಂದ ಉತ್ತರ ಭಾರತದ ರಾಜ್ಯಗಳಿಗೆ ಅಂಡಮಾನ್ ನಿಕೋಬಾರ್ ಹಾಗೂ ಹೊರ ದೇಶಗಳಾದ ಬಾಂಗ್ಲಾ, ಪಾಕಿಸ್ತಾನ, ದುಬೈಗೂ ಇಲ್ಲಿನ ಟೊಮೊಟೊ ರಫ್ತಾಗುತ್ತಿತ್ತು.
ಆದರೆ ಮಹಾರಾಷ್ಟ್ರದ ನಾಸಿಕ್ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಲ್ಲೂ ಕೂಡಾ ಸ್ಥಳೀಯವಾಗಿ ಟೊಮೆಟೋ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಟೊಮೆಟೊಗೆ ಹೊರ ರಾಜ್ಯಗಳಿಂದ ಬೇಡಿಕೆ ಕಡಿಮೆಯಾಗಿದೆ.
ಏಕಾಏಕಿ ಟೊಮೇಟೊಗೆ ಬೆಲೆ ಏರಿಕೆಯಾಗಿದ್ದರಿಂದ ರೈತರು ಉತ್ಸಾಹದಲ್ಲಿ ಬೆಳೆದ ಟೊಮೇಟೋ ಇದೀಗ ಬೆಲೆ ಇಲ್ಲದೇ ಸೊರಗಿದೆ. ಅಂತೂ ಇಂತು ಏಕಾಏಕಿ ಬೆಲೆ ಏರಿಕೆಯಾಗಿ ಏಕಾಏಕಿ ಬೆಲೆ ಇಳಿಸಿಕೊಳ್ಳುವ ಟೊಮೇಟೊ ರೈತರಿಗೆ ಸವಾಲಿನ ಬೆಳೆಯಾಗಿ ಪರಿಣಮಿಸಿದೆ.