ನಿನ್ನೆ ಬೆಂಗಳೂರಿನಲ್ಲಿ ಸೇರಿದ್ದ ಜನ ಎಷ್ಟು?: ಶಾಕಿಂಗ್ ಮಾಹಿತಿ ನೀಡಿದ ಸಚಿವ ಪರಮೇಶ್ವರ್ - Mahanayaka
11:06 AM Wednesday 22 - October 2025

ನಿನ್ನೆ ಬೆಂಗಳೂರಿನಲ್ಲಿ ಸೇರಿದ್ದ ಜನ ಎಷ್ಟು?: ಶಾಕಿಂಗ್ ಮಾಹಿತಿ ನೀಡಿದ ಸಚಿವ ಪರಮೇಶ್ವರ್

g parameshwar
05/06/2025

ಬೆಂಗಳೂರು:  ಐಪಿಎಲ್ ಗೆದ್ದ ಆರ್ ಸಿಬಿ ತಂಡದ ವಿಜಯೋತ್ಸವ ಆಚರಣೆ ವೇಳೆ ನಡೆದ ದುರಂತಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಹಾಗೂ ವಿಧಾನ ಸೌಧದ ಆವರಣದಲ್ಲಿ ಮಂಗಳವಾರ ಸಂಜೆ ಸುಮಾರು 8 ಲಕ್ಷ ಜನರು ನೆರೆದಿದ್ದರು ಎಂದು ಪರಮೇಶ್ವರ್ ಬಹಿರಂಗಪಡಿಸಿದ್ದಾರೆ.

ವಿಧಾನಸೌಧದ ಹೊರಗೆ 1 ಲಕ್ಷ ಜನರು ಮತ್ತು ಕ್ರೀಡಾಂಗಣದ ಹೊರಗೆ 25,000 ಜನರು ಇದ್ದರು ಎಂದು ನಾವು ಅಂದಾಜಿಸಿದ್ದೇವೆ. 2.5 ಲಕ್ಷ ಜನರು ಸೇರಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ. ಅಂದು 8.70 ಲಕ್ಷ ಮೆಟ್ರೋ ಟಿಕೆಟ್‌ ಗಳು ಮಾರಾಟ ಆಗಿವೆ. ಅವರಲ್ಲಿ ಹೆಚ್ಚಿನವರು ಕ್ರಿಕೆಟ್ ಅಭಿಮಾನಿಗಳಾಗಿದ್ದಾರೆ ಎಂದು ಪರಮೇಶ್ವರ್ ತಿಳಿಸಿದರು.

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಸಂಭ್ರಮಾಚರಣೆ ಆಯೋಜನೆಗೊಂಡಿದ್ದ ಪ್ರದೇಶದಲ್ಲಿ ಸುಮಾರು 8 ಲಕ್ಷ ಜನರು ಇದ್ದರು. ಬೆಂಗಳೂರಿನಲ್ಲಿ ಕ್ರಿಕೆಟ್‌ ಗಾಗಿ ಇಷ್ಟೊಂದು ಜನರು ಸೇರಿದ್ದ ಉದಾಹರಣೆ ಇದಕ್ಕಿಂತ ಮೊದಲು ಇರಲಿಲ್ಲ. ಅದು ಚೆನ್ನಾಗಿ ನಡೆದಿದ್ದರೆ ಅದು ದಾಖಲೆಯಾಗುತ್ತಿತ್ತು. ನಾನು ಆರ್‌ ಸಿಬಿ ಜೊತೆ ಮಾತನಾಡಿದ್ದೇನೆ ಮತ್ತು ಕೆಎಸ್‌ ಸಿಎ ಜೊತೆ ಮಾತನಾಡಿದ್ದೇನೆ. ಅವರು ತಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿದ್ದಾರೆ ಎಂದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ