ಪತಿಯನ್ನೇ ಕೊಲೆ ಮಾಡಿಸಿದ ಪತ್ನಿ: 3 ವರ್ಷಗಳ ನಂತರ ಮಹಿಳೆಯನ್ನು ಬಂಧಿಸಲು ಸಹಾಯ ಮಾಡಿದ ವಾಟ್ಸಾಪ್ ಮೆಸೇಜ್..!

2021 ರಲ್ಲಿ ಮಿನಿ ಟ್ರಕ್ ವೊಂದು ಮನೆಯ ಬಳಿ ವ್ಯಕ್ತಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡು ಎರಡೂ ಕಾಲುಗಳು ಮುರಿದವು. ಹೀಗಾಗಿ ಟ್ರಕ್ ಚಾಲಕ ದೇವ್ ಸುನಾರ್, ಸಂತ್ರಸ್ತ ವಿನೋದ್ ಬರಾರಾ ಅವರ ಬಳಿ ಪ್ರಕರಣವನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಾನೆ. ಆದರೆ ಸಂತ್ರಸ್ತ ಇದಕ್ಕೆ ನಿರಾಕರಿಸುತ್ತಾರೆ. ಹೀಗಾಗಿ ಟ್ರಕ್ ಚಾಲಕ ಅವನನ್ನು ತನ್ನ ಮನೆಯೊಳಗೆ ಗುಂಡಿಕ್ಕಿ ಕೊಲ್ಲುತ್ತಾನೆ.
ಈ ಭಯಾನಕ ಕೊಲೆ ಪ್ರಕರಣ ನಡೆದು ಮೂರು ವರ್ಷಗಳ ನಂತರ ವಾಟ್ಸಾಪ್ ಸಂದೇಶದ ಮೂಲಕ ಪೊಲೀಸರು ಅಂತಿಮವಾಗಿ ಕೊಲೆ ರಹಸ್ಯವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ನ ಜಿಮ್ ತರಬೇತುದಾರನನ್ನು ಮದುವೆಯಾಗಲು ಮೃತನ ಪತ್ನಿ ನಿಧಿ ಈ ಕೊಲೆಗೆ ಸಂಚು ರೂಪಿಸಿದ್ದಳು ಎಂದು ಪೊಲೀಸರು ಕಂಡುಕೊಂಡಿದ್ದಾರೆ.
ಕಂಪ್ಯೂಟರ್ ಇನ್ಸ್ ಟಿಟ್ಯೂಟ್ ನಡೆಸುತ್ತಿದ್ದ ವಿನೋದ್ ಬರಾರಾ ನಿಧಿ ಅವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಓರ್ವ ಮಗಳು ಇದ್ದಳು. ಅವರು ಹರಿಯಾಣದ ಪಾಣಿಪತ್ ನಲ್ಲಿ ವಾಸಿಸುತ್ತಿದ್ದರು.
ಆರೋಪಿ ನಿಧಿ ತನ್ನ ಜಿಮ್ ತರಬೇತುದಾರ ಸುಮಿತ್ ಅವರನ್ನು ಪ್ರೀತಿಸಿದ ನಂತರ ಇವರ ಜೀವನದಲ್ಲಿ ಅಕ್ರಮ ಸಂಬಂಧ ಪ್ರಾರಂಭವಾಯಿತು. ಪತಿ ವಿನೋದ್ ಗೆ ಈ ವಿಷಯ ತಿಳಿಯುತ್ತಿದ್ದಂತೆ ವಿರೋಧ ವ್ಯಕ್ತಪಡಿಸಿದ. ಈ ವಿಷಯದಲ್ಲಿ ದಂಪತಿಗಳ ನಡುವೆ ಆಗಾಗ ವಾಗ್ವಾದ ನಡೆಯುತ್ತಿತ್ತು.
ನಿತ್ಯದ ಜಗಳಗಳನ್ನು ಸಹಿಸಲಾಗದೆ ನಿಧಿ ಸುಮಿತ್ ಜೊತೆ ಸೇರಿ ಪತಿಯನ್ನು ಕೊಲ್ಲಲು ಸಂಚು ರೂಪಿಸಿದ್ದಳು. ಇವರಿಬ್ಬರು ವಿನೋದ್ ನನ್ನು ಟ್ರಕ್ ನ ಕೆಳಗೆ ಪುಡಿಮಾಡಿ ಕೊಲ್ಲಲು ಪಂಜಾಬ್ ನ ದೇವ್ ಸುನಾರ್ ಗೆ ಗುತ್ತಿಗೆ ನೀಡಿದರು. ಹಿಟ್ ಕೆಲಸಕ್ಕಾಗಿ ಸುನಾರ್ ಗೆ ಸುಮಾರು ಹತ್ತು ಲಕ್ಷ ರೂ. ನಗದನ್ನು ನೀಡಲಾಗಿತ್ತು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth