ಮಳೆಯ ತೀವ್ರತೆಗೆ ಮನೆಯೊಳಗೆ ನುಗ್ಗಿದ ಬೃಹತ್ ಕಾಳಿಂಗ ಸರ್ಪ! - Mahanayaka
10:37 AM Wednesday 15 - October 2025

ಮಳೆಯ ತೀವ್ರತೆಗೆ ಮನೆಯೊಳಗೆ ನುಗ್ಗಿದ ಬೃಹತ್ ಕಾಳಿಂಗ ಸರ್ಪ!

chikamagalore
25/05/2024

ಚಿಕ್ಕಮಗಳೂರು: ಮಲೆನಾಡಲ್ಲಿ ಭಾರೀ ಮಳೆ ಹಿನ್ನೆಲೆ ಬೃಹತ್ ಕಾಳಿಂಗ ಸರ್ಪ ವೊಂದು ಆಶ್ರಯಕ್ಕಾಗಿ ಮನೆಯೊಳಗೆ ನುಗ್ಗಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಶೆಟ್ಟಿಕೊಪ್ಪ ಎಂಬಲ್ಲಿ ನಡೆದಿದೆ.


Provided by

ಇಲ್ಲಿನ ನಿವಾಸಿ ಮಂಜುನಾಥ್ ಗೌಡ ಎಂಬವರ ಮನೆಯ ತೆರೆದಿದ್ದ ಹಿಂಬಾಗಿಲಿನ ಮೂಲಕ ಮನೆಗೆ ನುಗ್ಗಿದ ಕಾಳಿಂಗ, ಅಡುಗೆ ಮನೆಯಲ್ಲಿ ಅವಿತಿತ್ತು.

12 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ ಕಂಡು ಮನೆಯವರು ಭಯಭೀತರಾಗಿದ್ದರು. ತಕ್ಷಣವೇ ಸ್ನೇಕ್ ಹರೀಂದ್ರ ಅವರಿಗೆ ಕರೆ ಮಾಡಿದ್ದು, ಸ್ಥಳಕ್ಕೆ ಆಗಮಿಸಿದ ಅವರು ಸಾಹಸಮಯವಾಗಿ ಕಾಳಿಂಗ ಸರ್ಪವನ್ನು ಹಿಡಿದು, ಸುರಕ್ಷಿತವಾಗಿ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.

 

ಇತ್ತೀಚಿನ ಸುದ್ದಿ