ನೆರೆಹೊರೆಯ ಮಕ್ಕಳೊಂದಿಗೆ ಆಟವಾಡಿದ್ದಕ್ಕೆ ಮಲತಂದೆಯಿಂದ ಬಾಲಕನ ಹತ್ಯೆ! - Mahanayaka
8:52 PM Saturday 13 - December 2025

ನೆರೆಹೊರೆಯ ಮಕ್ಕಳೊಂದಿಗೆ ಆಟವಾಡಿದ್ದಕ್ಕೆ ಮಲತಂದೆಯಿಂದ ಬಾಲಕನ ಹತ್ಯೆ!

polices
13/12/2025

ಹೈದರಾಬಾದ್: ಮಲತಂದೆಯೊಬ್ಬ ತೀವ್ರವಾಗಿ ಥಳಿಸಿದ ನಂತರ ಬಾಲಕನೊಬ್ಬ ಸಾವನ್ನಪ್ಪಿರುವ ಘಟನೆ ಹೈದರಾಬಾದ್​ ನಗರದ ಬಂಡ್ಲಗುಡದಲ್ಲಿ ನಡೆದಿದೆ.

ಮೊಹಮ್ಮದ್ ಅಸ್ಗರ್ ಸಾವನ್ನಪ್ಪಿದ ಬಾಲಕನಾಗಿದ್ದಾನೆ. ಮಲತಂದೆ ಶೇಖ್ ಇಮ್ರಾನ್ ಬಾಲಕನ ಸಾವಿಗೆ ಕಾರಣನಾದ ಆರೋಪಿಯಾಗಿದ್ದಾನೆ. ನೆರೆಹೊರೆಯವರ ಮೇಲೆ ಇಮ್ರಾನ್ ಗೆ ಇದ್ದ ಕೋಪ, ಅಸೂಯೆಯ ಕಾರಣದಿಂದಾಗಿ ಈ ಕೊಲೆ ನಡೆದಿದೆ ಎಂದು ತಿಳಿದು ಬಂದಿದೆ.

ಮೃತ ಬಾಲಕ ಅಸ್ಗರ್ ತನ್ನ ವಯೋ ಸಹಜ ಬಯಕೆಯಂತೆ, ನೆರೆಹೊರೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಆದರೆ ಆ ಮಕ್ಕಳ ಗುಂಪಿನೊಂದಿಗೆ ಆಟವಾಡುವುದು ಇಮ್ರಾನ್ ಗೆ ಇಷ್ಟವಿರಲಿಲ್ಲ. ಹೀಗಾಗಿ ಅಸ್ಗರ್ ಗೆ ಆತ ಹಲವು ಬಾರಿ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ.

ಆದ್ರೆ, ಅಸ್ಗರ್ ಮತ್ತೆ ಮತ್ತೆ ನೆರೆಹೊರೆಯ ಮಕ್ಕಳೊಂದಿಗೆ ಆಟವಾಡುವುದನ್ನು ಕಂಡು  ಕೆಂಡಾಮಂಡಲವಾಗಿದ್ದ ಇಮ್ರಾನ್,  ಅಸ್ಗರ್ ಗೆ   ಕೈಗಳಿಂದ ಹಿಗ್ಗಾಮುಗ್ಗಾ ಥಳಿಸಿ, ಬಾಲಕನನ್ನು ಹಿಡಿದೆತ್ತಿ ನೆಲಕ್ಕೆ ಬಡಿದಿದ್ದಾನೆ. ಪರಿಣಾಮವಾಗಿ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸಾವು ನೋವಿನ ನಡುವೆ ಹೋರಾಡುತ್ತಿದ್ದ ಬಾಲಕ ಶುಕ್ರವಾರ ಕೊನೆಯುಸಿರೆಳೆದಿದ್ದಾನೆ. ಸದ್ಯ  ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ