ತಾಯಿ ಕೆಲಸ ಮುಗಿಸಿ ಬಂದಾಗ ಪ್ರಿಯಕರನೊಂದಿಗೆ ಪತ್ತೆಯಾದ ಮಗಳು: ಪ್ರಿಯಕರನನ್ನು ಹೊರಕಳುಹಿಸಿ ತಾಯಿಂದ ಘೋರ ಕೃತ್ಯ!

ಹೈದರಾಬಾದ್: ತನ್ನ ಮಗಳು ಪ್ರಿಯಕರನೊಂದಿಗೆ ಮನೆಯಲ್ಲಿರುವುದನ್ನು ಕಂಡ ಮಹಿಳೆಯೊಬ್ಬರು ಮಗಳನ್ನು ಕತ್ತುಹಿಸುಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದ್ ನ ಇಬ್ರಾಹಿಂಪಟ್ಟಣದಲ್ಲಿ ನಡೆದಿದೆ.
ಭಾರ್ಗವಿ(19) ಹತ್ಯೆಗೀಡಾದ ದುರ್ದೈವಿಯಾಗಿದ್ದು, ಈಕೆಯ ತಾಯಿ ಜಂಗಮ್ಮ ಹತ್ಯೆ ನಡೆಸಿದ ಆರೋಪಿಯಾಗಿದ್ದಾಳೆ.
ಬುಧವಾರ ಜಂಗಮ್ಮ ಕೆಲಸ ಮುಗಿಸಿ ಮನೆಗೆ ಊಟ ಮಾಡಲೆಂದು ಬಂದಿದ್ದಾಳೆ. ಈ ವೇಳೆ ಮಗಳು ಭಾರ್ಗವಿ ತನ್ನ ಪ್ರಿಯಕರನ ಜೊತೆಗೆ ಮನೆಯಲ್ಲಿರುವುದನ್ನು ನೋಡಿದ್ದಾಳೆ.
ಪ್ರಿಯಕರನನ್ನು ಮನೆಯಿಂದ ಹೊರಗೆ ಕಳುಹಿಸಿದ ಜಂಗಮ್ಮ, ಮಗಳ ಮೇಲೆ ಹಲ್ಲೆ ನಡೆಸಿದ್ದು, ಬಳಿಕ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾರ್ಗವಿಯನ್ನು ತಾಯಿ ಹತ್ಯೆ ಮಾಡುವುದನ್ನು ಆಕೆಯ ಅಪ್ರಾಪ್ತ ವಯಸ್ಸಿನ ಸಹೋದರ ನೋಡಿದ್ದು, ಆತ ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth