ನಾನು ಏನು ಮಾಡುತ್ತಿದ್ದೇನೆ ಅಂತ ಗೊತ್ತಿಲ್ಲ, ಆದ್ರೆ ತುಂಬಾ ತಪ್ಪು ಮಾಡುತ್ತಿದ್ದೇನೆ: ದೇವರಿಗೆ ಭಕ್ತನ ಪತ್ರ! - Mahanayaka
10:58 AM Thursday 29 - January 2026

ನಾನು ಏನು ಮಾಡುತ್ತಿದ್ದೇನೆ ಅಂತ ಗೊತ್ತಿಲ್ಲ, ಆದ್ರೆ ತುಂಬಾ ತಪ್ಪು ಮಾಡುತ್ತಿದ್ದೇನೆ: ದೇವರಿಗೆ ಭಕ್ತನ ಪತ್ರ!

chamarajeshwar
30/09/2023

ಚಾಮರಾಜನಗರ: ದೇವರೆ ನಾನು ಏನು ಮಾಡುತ್ತಿದ್ದೇನೆ ಅಂತ ಗೊತ್ತಿಲ್ಲ, ಆದರೆ ತುಂಬಾ ತಪ್ಪು ಮಾಡುತ್ತಿದ್ದೇನೆ. ಇನ್ನು ಮುಂದೆ ಆ ರೀತಿ ಗೊಂದಲ ಆಗದಂತೆ ನೋಡಿಕೊ… ಹಾಯ್ ಪುಟ್ಟಾ, ಹೇಗಿದಿಯ ನೀನು ನಮ್ಮನ್ನು ಮಿಸ್ ಮಾಡ್ಕೋತಿದಿಯಾ, ನೀನು ಹೀಗೆಲ್ಲ ಮಾಡಬಾರದಿತ್ತು ಹೀಗೆಲ್ಲ ಭಕ್ತರು ತಮ್ಮ ನೋವುಗಳನ್ನ ಚಾಮರಾಜನಗರದ‌ ಚಾಮರಾಜೇಶ್ವರ ದೇವಾಲಯದ ಹುಂಡಿಗೆ ಚೀಟಿಯಲ್ಲಿ ಬರೆದು ಹಾಕಿದ್ದಾರೆ.

ದೇವಾಲಯದಲ್ಲಿ ನಡೆಯುತ್ತಿರುವ ಹುಂಡಿ ಎಣಿಕೆ ಕಾರ್ಯದ ವೇಳೆ  ಭಕ್ತರು ತಮ್ಮ ಭಾವನೆಗಳನ್ನ ಬರೆದು ದೇವರಿಗೆ ಅರ್ಪಿಸಿದ್ದಾರೆ.  ಪ್ರೀತಿಸಿದ ಯುವಕನ ಜೊತೆ ಓಡಿ ಹೋದ ಬೆಸ್ಟ್ ಫ್ರೆಂಡ್ ಗೆ ಪತ್ರ ಬರೆದ ಸ್ನೇಹಿತ, ನೀನು ಪ್ರೀತಿಸಿದವನನ್ನೇ ಮದುವೆ ಆಗುವುದಿದ್ದರೆ ಮನೆಯವರನ್ನೆಲ್ಲ ಒಪ್ಪಿಸಬಹುದಿತ್ತು, ದೊಡ್ಡ ತಪ್ಪು ಮಾಡಿಬಿಟ್ಟೆ ಎಂದು ಬರೆದಿದ್ದಾನೆ.

ಇನ್ನೋರ್ವ ರಾಜಕೀಯ ವ್ಯಕ್ತಿ ದೇವರ ಭಕ್ತ,  ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿಸು ದೇವರೆ. ಏಪ್ರಿಲ್ 9ರಂದು ಬಂಡಿಪುರಕ್ಕೆ ಭೇಟಿ ನೀಡಿದ್ದ ಪ್ರಧಾನಿಯನ್ನು ಭೇಟಿ ಮಾಡಿಸು ಎಂದು ಬರೆದು ಹುಂಡಿಗೆ ಚೀಟಿ ಹಾಕಿದ್ದಾನೆ.

ಇತ್ತೀಚಿನ ಸುದ್ದಿ