ಮನೆ ಕಟ್ಟೋಕೆ,  ಮಗನ ಮದುವೆ ಮಾಡೋಕೆ ಸಂಸದರ ನಿಧಿ ಬಳಸಿಕೊಂಡೆ: ಬಿಜೆಪಿ ಸಂಸದನ ಹೇಳಿಕೆ - Mahanayaka

ಮನೆ ಕಟ್ಟೋಕೆ,  ಮಗನ ಮದುವೆ ಮಾಡೋಕೆ ಸಂಸದರ ನಿಧಿ ಬಳಸಿಕೊಂಡೆ: ಬಿಜೆಪಿ ಸಂಸದನ ಹೇಳಿಕೆ

soyam bapu rao
20/06/2023


Provided by

ಮನೆ ಕಟ್ಟೋಕೆ , ಮಗನ ಮದುವೆ ಮಾಡಲು ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯನ್ನು ಬಳಸಿಕೊಂಡೆ ಎಂದು ಬಿಜೆಪಿ ಸಂಸದರೊಬ್ಬರು ಹೇಳಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದೆ.

ಸಂಸದ ಸೋಯಂ ಬಾಪು ರಾವ್ ಅವರದ್ದು ಎನ್ನಲಾದ ವಿಡಿಯೋ ಭಾರೀ ಸಂಚಲನ ಸೃಷ್ಟಿಸಿದೆ. ತೆಲಂಗಾಣದ ಆದಿಲಾಬಾದ್ ನಲ್ಲಿ ಬಿಜೆಪಿ ಸ್ಥಳೀಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿರುವ ಬಾಪುರಾವ್, ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನಾ ನಿಧಿಯಲ್ಲಿ ಎರಡನೇ ಬಾರಿಗೆ ನನಗೆ 2.5 ಕೋಟಿ ಬಂದಿತ್ತು. ಅದರಲ್ಲೊಂದಿಷ್ಟು ಹಣವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ ಉಳಿದಿದ್ದನ್ನು ಮನೆ ಕಟ್ಟೋಕೆ ಮತ್ತು ಮಗನ ಮದುವೆ ಮಾಡುವುದಕ್ಕೆ ಬಳಸಿಕೊಂಡೆ ಎಂದು ಹೇಳಿರುವುದು ವಿಡಿಯೋದಲ್ಲಿದೆ.

ಕ್ಷೇತ್ರದಲ್ಲಿ ನನಗೆ ಮನೆ ಇಲ್ಲದ ಕಾರಣ ಸ್ವಲ್ಪ ಹಣವನ್ನು ಮನೆ ನಿರ್ಮಾಣಕ್ಕೆ ಬಳಸಿದ್ದೇನೆ. ಬೇರೆ ಯಾವ ನಾಯಕರೂ ಇದನ್ನು ಒಪ್ಪಿಕೊಳ್ಳುವುದಿಲ್ಲ, ಆದರೆ ನಾನು ಒಪ್ಪಿಕೊಳ್ಳುತ್ತೇನೆ. ನನ್ನ ಮಗನ ಮದುವೆಗೂ ಆ ಹಣವನ್ನು ಬಳಸಿದ್ದೇನೆ ಎಂದು ಅವರು ಹೇಳಿಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ