ನಾನು ರಾಜೀನಾಮೆ ನೀಡುವುದೇ ಇಲ್ಲ ಎಂದ ಮಣಿಪುರ ಸಿಎಂ: ಇಂಫಾಲ್ ನಲ್ಲಿ ಹೈ ವೋಲ್ಟೇಜ್ ಡ್ರಾಮಾ ಯಾಕಾಯಿತು ಗೊತ್ತಾ..? - Mahanayaka
11:13 AM Tuesday 21 - October 2025

ನಾನು ರಾಜೀನಾಮೆ ನೀಡುವುದೇ ಇಲ್ಲ ಎಂದ ಮಣಿಪುರ ಸಿಎಂ: ಇಂಫಾಲ್ ನಲ್ಲಿ ಹೈ ವೋಲ್ಟೇಜ್ ಡ್ರಾಮಾ ಯಾಕಾಯಿತು ಗೊತ್ತಾ..?

30/06/2023

ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಯನ್ನು ತೊರೆಯುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.

ರಾಜ್ಯದಲ್ಲಿ ವ್ಯಾಪಕವಾಗಿ ಹರಡಿರುವ ಜನಾಂಗೀಯ ಹಿಂಸಾಚಾರವನ್ನು ಗಮನದಲ್ಲಿಟ್ಟುಕೊಂಡು ರಾಜೀನಾಮೆ ನೀಡುವುದಿಲ್ಲ ಎಂದು ಮಣಿಪುರ ಸಿಎಂ ಟ್ವೀಟ್ ಮಾಡಿದ್ದಾರೆ.

‘ಈ ನಿರ್ಣಾಯಕ ಘಟ್ಟದಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ಸಿಂಗ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಇಂಫಾಲ್ ನಲ್ಲಿ ಗುರುವಾರ ನಡೆದ ಹೊಸ ಹಿಂಸಾಚಾರದ ನಂತರ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲು ಯೋಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿತ್ತು.

ಸಿಎಂ ರಾಜೀನಾಮೆ ಪತ್ರವನ್ನು ಬರೆದಿದ್ದಾರೆ. ಆದರೆ ಆ ನಿರ್ಧಾರವನ್ನು ಕೈಬಿಡಲು ಅವರ ಬೆಂಬಲಿಗರು ಮನವೊಲಿಸಿದ್ದಾರೆ ಎಂಬ ಮಾತು ಕೇಳಿಬಂದಿತ್ತು.
ಇದಕ್ಕೂ ಮುನ್ನ ಮಧ್ಯಾಹ್ನ, ಕಪ್ಪು ಶರ್ಟ್ ಧರಿಸಿದ ನೂರಾರು ಯುವಕರು ಮತ್ತು ಮಹಿಳೆಯರು ಸಿಎಂ ನಿವಾಸದ ಮುಂದೆ ಕುಳಿತು ಬಿರೇನ್ ಸಿಂಗ್ ರಾಜೀನಾಮೆ ನೀಡಬಾರದು ಎಂದು ಒತ್ತಾಯಿಸಿದರು.

ಮಣಿಪುರ ಸಿಎಂ ಅವರ ಬೆಂಗಾವಲು ವಾಹನವನ್ನು ಸಾವಿರಾರು ಪ್ರತಿಭಟನಾಕಾರರು ರಾಜಭವನದ ಸಮೀಪ ತಡೆದ ನಂತರ ಇಂಫಾಲ್‌ನಲ್ಲಿ ಹೈಟೆನ್ಷನ್ ಡ್ರಾಮಾ ನಡೆದ ನಂತರ ಈ ಘಟನೆ ನಡೆದಿದೆ. ಆದಾಗ್ಯೂ, ಮಹಿಳಾ ನಾಯಕರು ಅವರ ನಿವಾಸದಿಂದ ಹೊರಬಂದು ಸಿಎಂ ಅವರು ರಾಜೀನಾಮೆ ನೀಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ ಎಂದು ಜನಸಮೂಹಕ್ಕೆ ತಿಳಿಸಿದ ನಂತರ, ಆ ಗುಂಪು ಅವರ ನಿವಾಸದಿಂದ ಹೊರಟುಹೋಯಿತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ