ಹಸ್ತಮೈಥುನ ಮಾಡಿ, ಐಸ್ ಕ್ರೀಮ್ ಗೆ ವೀರ್ಯ ಬೆರೆಸಿದ ಐಸ್ ಕ್ರೀಮ್ ಮಾರಾಟಗಾರ: ಇದೆಂಥಾ ಹೀನ ಕೃತ್ಯ!

ಹೈದರಾಬಾದ್: ಐಸ್ ಕ್ರೀಂ ಮಾರಾಟಗಾರನೋರ್ವ ಐಸ್ ಕ್ರೀಮ್ ಗೆ ತನ್ನ ವೀರ್ಯ ಮಿಶ್ರಣ ಮಾಡಿ ಮಾರಾಟ ಮಾಡುತ್ತಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇದರ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಆರೋಪಿಯನ್ನು ಬಂಧಿಸಲಾಗಿದೆ.
ರಾಜಸ್ಥಾನದ ಕಲುರಾಮ್ ಕರ್ಬಿಯಾ ಬಂಧಿತ ಆರೋಪಿಯಾಗಿದ್ದಾನೆ. ಈತ ಹಸ್ತಮೈಥುನ ಮಾಡಿ, ವೀರ್ಯವನ್ನು ಐಸ್ ಕ್ರೀಂಗೆ ಮಿಶ್ರಣ ಮಾಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮಾಚ್ 19ರಂದು ಈ ವಿಡಿಯೋ ವೈರಲ್ ಆಗಿದೆ. ಐಸ್ ಕ್ರೀಮ್ ಗೆ ವೀರ್ಯ ಬೆರೆಸುತ್ತಿದ್ದ ವೇಳೆ ಆರೋಪಿ ಸಿಕ್ಕಿಬಿದ್ದಿದ್ದಾನೆ. ಹೈದರಾಬಾದ್ ನ ವಾರಂಗಲ್, ನೆಕ್ಕೊಂಡ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ಈ ಘಟನೆ ನಡೆದಿದೆ.
ಇನ್ನೂ ಘಟನೆ ಸಂಬಂಧ ಆಹಾರ ಇಲಾಖೆ ಅಧಿಕಾರಿಗಳು ಐಸ್ ಕ್ರೀಮ್ ನ ಮಾದರಿ ಸಂಗ್ರಹಿಸಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 294ರ ಅಡಿ ಪ್ರಕರಣ ದಾಖಲಿಸಲಾಗುವುದು ಎಂದು ಆಹಾರ ಇಲಾಖೆ ನಿರೀಕ್ಷಕ ಕೃಷ್ಣಮೂರ್ತಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth