ಮಳೆ ಹೀಂಗ್ ಹಿಂಸೆ ಕೊಟ್ರೆ ಜನ ಬದ್ಕೋದಾದ್ರು ಹೇಗೆ? - Mahanayaka
9:22 PM Wednesday 27 - August 2025

ಮಳೆ ಹೀಂಗ್ ಹಿಂಸೆ ಕೊಟ್ರೆ ಜನ ಬದ್ಕೋದಾದ್ರು ಹೇಗೆ?

chikkamagaluru
19/07/2024


Provided by

ಚಿಕ್ಕಮಗಳೂರು :  ಮಲೆನಾಡ ಮಳೆ ಅಬ್ಬರಕ್ಕೆ ಜನರ ಬದುಕೇ ಜಲಾವೃತವಾಗಿದೆ.  ಹೊಲ–ಗದ್ದೆ, ತೋಟ, ಮನೆ, ರಸ್ತೆ, ಓಣಿ ಮಳೆರಾಯ ಯಾವ್ದುನ್ನು ಬಿಡದೇ ಮಳೆ ನೀರು ನುಗ್ಗುತ್ತಿದೆ.

ಮಳೆರಾಯ ಎಲ್ಲೆಂದರಲ್ಲಿ ಮನಸ್ಸೋ ಇಚ್ಛೆ ನುಗ್ತಿದ್ದಾನೆ.  ಮಳೆ ನೀರು ನೋಡ್ತಾ ಮೂಕ ಪ್ರೇಕ್ಷಕನಾಗಿ ನಿಲ್ಲೋದಷ್ಟೆ ಮಲೆನಾಡಿಗರಿಗೆ ಉಳಿದಿರೋದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಸ್ತೆಯಲ್ಲಿ ಒಂದು, ಒಂದೂವರೆ ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ.  ನದಿಯಂತೆ ರಸ್ತೆಯಲ್ಲಿ ಅಬ್ಬರಿಸಿಕೊಂಡು ನೀರು ನುಗ್ಗಿದ್ರೆ ಮನುಷ್ಯ ಏನ್ ಮಾಡ್ತಾನೆ, ಹೇಗ್ ಬದುಕ್ ಬೇಕು  ಅಂತ ಇಲ್ಲಿನ ನಿವಾಸಿಗಳು ಮಾತನಾಡುತ್ತಿದ್ದಾರೆ.

ಭಾರೀ ಮಳೆಯಿಂದಾಗಿ ಕಳಸ, ಕೊಪ್ಪ ತಾಲೂಕಿನ ಮಳೆಗೆ ಮಲೆನಾಡಿಗರ ಬದುಕು ಮೂರಾಬಟ್ಟೆಯಾಗಿದೆ.  ಬಸರೀಕಟ್ಟೆ, ಡೋಬಿಹಳ್ಳಿ, ಬಿಳಾಲುಕೊಪ್ಪ, ಅಬ್ಬಿಕಲ್ಲು, ಬಾಳೆಹೊಳೆ, ಜಯಪುರದಲ್ಲಿ  ಭಾರೀ ಮಳೆಯಾಗುತ್ತಿದ್ದು, ಮಳೆ ನೀರು ತಾನು ಹರಿದದ್ದೇ ನದಿ ಎಂಬಂತೆ ಮುನ್ನುಗ್ಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ