ಅಯ್ಯಯಪ್ಪಾ.... ಈ ಅಪಘಾತ ನೋಡುದ್ರೆ ಜೀವ ಝಲ್ ಅನ್ನುತ್ತೆ! - Mahanayaka

ಅಯ್ಯಯಪ್ಪಾ…. ಈ ಅಪಘಾತ ನೋಡುದ್ರೆ ಜೀವ ಝಲ್ ಅನ್ನುತ್ತೆ!

chikkamagaluru
20/08/2024

ಚಿಕ್ಕಮಗಳೂರು:  ಅಯ್ಯಯಪ್ಪಾ…. ಈ ಅಪಘಾತ ನೋಡುದ್ರೆ ಜೀವ ಝಲ್ ಅನ್ನುತ್ತೆ, ಅಪಘಾತವಾದ ನಂತರದ ದೃಶ್ಯ ನೋಡುದ್ರೆ ಯಾರ್ ಗುರು ಗಟ್ಟಿ ಪಿಂಡ ಅನ್ಸತ್ತೆ.

ಚಿಕ್ಕಮಗಳೂರು ತಾಲೂಕಿನ ಚಿಕ್ಕಮಾಗರವಳ್ಳಿಯಲ್ಲಿ ನಡೆದ ಅಪಫಾತ ಇದಾಗಿದೆ. ಆಲ್ದೂರಿನ ಸಂತೆ ಮೈದಾನದ ಬಳಿ ವೇಗವಾಗಿ ಬಂದ ಬೈಕ್ ರಸ್ತೆ ಬದಿಯ ಎಡ್ಜ್ ಗೆ ಇಳಿದಿದ್ದು ಸ್ಕಿಡ್ ಆಗಿ ಬೈಕ್ ಸವಾರ ವೇಗವಾಗಿ ರಸ್ತೆಗೆ ಬಿದ್ದಿದ್ದಾನೆ.

ರೈಡರ್ ಗಾಳಿಯಲ್ಲಿ ಒಂದು ರೌಂಡ್ ತಿರುಗಿ ಹಾರಿ ನೆಲಕ್ಕೆ ಅಪ್ಪಳಿಸಿದ್ದಾನೆ. ಆದರೂ,  ಅಪಘಾತದ ನಂತರ ತಾನೇ ಎದ್ದು ನಿಂತು, ಬೈಕ್ ಎತ್ತಿಕೊಂಡು ಸ್ಥಳದಿಂದ ತೆರಳಿದ್ದಾನೆ. ಬೈಕ್ ನೆಲದಿಂದ 3—4 ಅಡಿ ಎತ್ತರಕ್ಕೆ ಜಿಗಿದಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ವಿಡಿಯೋ ನೋಡಿದವರೆಲ್ಲ, ಆತ ತುಂಬಾ ಲಕ್ಕಿ ಫೆಲೋ ಅಂತ ಹೇಳುತ್ತಿದ್ದಾರೆ. ಆದರೂ ರಸ್ತೆಯಲ್ಲಿ ಯಾವಾಗಲೂ ಸಮಾಧಾನದಿಂದ ಪ್ರಯಾಣಿಸಬೇಕು. ಅತಿಯಾದ ವೇಗ ಒಳ್ಳೆಯದಲ್ಲ, ಎಲ್ಲ ಸಮಯದಲ್ಲಿ ಅದೃಷ್ಟ ಅನ್ನೋದು ನಮ್ಮ ಜೊತೆಗಿರಲ್ಲ ಎನ್ನುವ ಮಾತುಗಳೂ ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ