ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ತೀವ್ರ ಮಳೆ: ಆರೆಂಜ್ ಅಲರ್ಟ್ ಘೋಷಣೆ - Mahanayaka
10:01 PM Saturday 18 - October 2025

ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ತೀವ್ರ ಮಳೆ: ಆರೆಂಜ್ ಅಲರ್ಟ್ ಘೋಷಣೆ

22/07/2023

ಮಹಾರಾಷ್ಟ್ರದ ವಿವಿಧ ಭಾಗಗಳಲ್ಲಿ ತೀವ್ರ ಮಳೆ ಸುರಿಯುತ್ತಿದೆ. ಪಾಲ್ಘರ್, ಥಾಣೆ, ರಾಯಗಢ, ರತ್ನಗಿರಿ ಮತ್ತು ಸಿಂಧುದುರ್ಗ ಜಿಲ್ಲೆಗಳ ಪ್ರತ್ಯೇಕ ಪ್ರದೇಶಗಳಲ್ಲಿ ಭಾನುವಾರದಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ನೀಡಿದೆ.


Provided by

ಮಧ್ಯ ಮಹಾರಾಷ್ಟ್ರದ ಕೊಂಕಣ, ಘಟ್ಟ ಪ್ರದೇಶಗಳು ಜುಲೈ 23-26 ರಿಂದ ಭಾರೀ ಮಳೆಯೊಂದಿಗೆ ಲಘು,ಮಧ್ಯಮ ಮಟ್ಟದಲ್ಲಿ ವ್ಯಾಪಕ ಮಳೆಯನ್ನು ನಿರೀಕ್ಷಿಸಬಹುದು. ಮುಂದಿನ 2 ದಿನಗಳಲ್ಲಿ ಮುಂಬೈನಲ್ಲಿ ಭಾರೀ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಅಲ್ಲದೇ ಉತ್ತರ ಕೊಂಕಣ, ಮಧ್ಯ ಮಹಾರಾಷ್ಟ್ರದಲ್ಲಿ ಇಂದು ರೀ ಮಳೆಯಾಗುವ ಬಗ್ಗೆ ಐಎಂಡಿ ಎಚ್ಚರಿಕೆ ನೀಡಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ವಿದರ್ಭ: ಯೆಯೋಟ್ಮಲ್ (240ಮಿಮೀ), ಮಹಾಗಾಂವ್ (230ಮಿಮೀ), ಮುರ್ತಜಾಪುರ (190ಮಿಮೀ), ಅರ್ನಿ (160ಮಿಮೀ) ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಮಳೆಯಾಗಿದೆ. ಕೊಂಕಣ: ಮಹದ್ (160ಮಿಮೀ), ಪೆನ್ (150ಮಿಮೀ), ವಾಡಾ (140ಮಿಮೀ) ಗಣನೀಯ ಪ್ರಮಾಣದ ಮಳೆಯನ್ನು ಅನುಭವಿಸುತ್ತಿರುವ ಪ್ರದೇಶಗಳಾಗಿವೆ. ಮಧ್ಯ ಮಹಾರಾಷ್ಟ್ರ: ಗಗನಬವಾಡ (170ಮಿಮೀ) ಮತ್ತು ಮಹಾಬಲೇಶ್ವರ (150ಮಿಮೀ) ಮಳೆಯಾಗಿದೆ. ಮರಾಠವಾಡ: ಕಿನ್ವಾಟ್ (140ಮಿಮೀ) ಮತ್ತು ಹಿಮಾಯತನಗರ (90ಮಿಮೀ) ಪ್ರಮಾಣದ ಮಳೆಯಾಗಿದೆ.

ಯವತ್ಮಾಲ್‌ನಲ್ಲಿ ಸಿಲುಕಿದ್ದ ಎಲ್ಲಾ 110 ಜನರ ರಕ್ಷಣೆ
ಭಾರೀ ಮಳೆಯಿಂದಾಗಿ ಯವತ್ಮಾಲ್ ಜಿಲ್ಲೆಯ ಮಹಾಗಾಂವ್ ಮತ್ತು ಆನಂದನಗರ ಪ್ರದೇಶಗಳಲ್ಲಿ ಸಿಲುಕಿಕೊಂಡಿದ್ದ ಎಲ್ಲಾ 110 ಜನರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ. ಯವತ್ಮಾಲ್ ಜಿಲ್ಲಾಡಳಿತದಿಂದ ಬಂದ ಮಾಹಿತಿಯ ಪ್ರಕಾರ, ಮಹಾಗಾಂವ್ ತಾಲೂಕಿನ ಆನಂದನಗರ ತಾಂಡಾದಲ್ಲಿ ಸಿಲುಕಿರುವ ಎಲ್ಲಾ 110 ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ