ಸಿಎಎ ದೃಢೀಕರಣ ಪತ್ರ ನೀಡಿದ ಆರ್ ಎಸ್ ಎಸ್ ಅಂಗ ಸಂಸ್ಥೆ: ಸಂಘ ಪರಿವಾರದ ನೇತೃತ್ವದಲ್ಲಿ ಹೆಲ್ಪ್ ಡೆಸ್ಕ್

ಸಿಎಎ ಅಪೇಕ್ಷಿಸುವವರಿಗೆ ದೃಢೀಕರಣ ಪತ್ರವನ್ನು ಆರ್ ಎಸ್ ಎಸ್ ಅಂಗ ಸಂಸ್ಥೆ ನೀಡಿರುವುದು ಮಾಧ್ಯಮದ ಗಮನ ಸೆಳೆದಿದೆ. ಪಾಕಿಸ್ತಾನದಿಂದ ಬಂದು ರಾಜಸ್ಥಾನದಲ್ಲಿ ನೆಲೆಸಿರುವ ಹಿಂದೂಗಳಿಗೆ ಆರೆಸ್ಸೆಸ್ ನ ಸೀಮಾಜನ್ ಕಲ್ಯಾಣ್ ಸಮಿತಿಯು ದೃಢೀಕರಣ ಸರ್ಟಿಫಿಕೇಟ್ ನೀಡಿದೆ. ಧರ್ಮವನ್ನು ದೃಢೀಕರಿಸುವ ಸರ್ಟಿಫಿಕೇಟ್ ಅನ್ನು ಪೂಜಾರಿಗಳು ಕೊಡಬಹುದು ಎಂದು ಕೇಂದ್ರ ಸರಕಾರ ಪ್ರಕಟಿಸಿದ ಸುತ್ತೋಲೆಯಲ್ಲಿ ಹೇಳಲಾಗಿರುವುದು ಇಲ್ಲಿ ಗಮನಾರ್ಹ.
ದಿ ಹಿಂದೂ ಪತ್ರಿಕೆ ಈ ಕುರಿತಾದ ಮಾಹಿತಿಯನ್ನು ಪ್ರಕಟಿಸಿದೆ. ಜೈಸಲ್ಮೀರ್ ಜೋದ್ಪುರ್ ಮುಂತಾದ ಪ್ರದೇಶಗಳಲ್ಲಿ ಸಂಘ ಪರಿವಾರದ ನೇತೃತ್ವದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯ ಆರಂಭಿಸಿರುವ ಪೋರ್ಟಲ್ ನ ಮೂಲಕ 330 ಕ್ಕಿಂತಲೂ ಅಧಿಕ ವ್ಯಕ್ತಿಗಳು ಅಪೇಕ್ಷೆ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಆದರೆ ಹೀಗೆ ಅಪೇಕ್ಷೆ ಸಲ್ಲಿಸುವಾಗ ಪ್ರಾದೇಶಿಕವಾಗಿ ಅಂಗೀಕರಿಸಲ್ಪಟ್ಟ ಒಂದು ಸಮುದಾಯ ಸಂಘಟನೆಯ ದೃಡೀಕರಣ ಸರ್ಟಿಫಿಕೇಟ್ ಅನ್ನು ಅಪ್ಲೋಡ್ ಮಾಡಬೇಕಾಗಿದೆ. ಈ ದೃಢೀಕರಣ ಪತ್ರವನ್ನೇ ರಾಜಸ್ಥಾನದಲ್ಲಿ ಆರ್ ಎಸ್ಎಸ್ ಅಂಗ ಸಂಸ್ಥೆ ನೀಡ್ತಾ ಇದೆ. ಈ ಸಂಘಟನೆ ನೋಂದಣಿಯಾಗಿದ್ದು ಸರ್ಟಿಫಿಕೇಟ್ ನೀಡುವ ಅರ್ಹತೆ ಹೊಂದಿದೆ ಎಂದು ಅದರ ವಕ್ತಾರರು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth