ಬೆಳ್ಳಂಬೆಳಗ್ಗೆ ಶಾಕ್: ತಮಿಳುನಾಡು ಸಚಿವ ಇ.ವಿ.ವೇಲುಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ

03/11/2023
ತಮಿಳುನಾಡು ಸಚಿವ ಇ.ವಿ.ವೇಲು ಅವರಿಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ತನಿಖೆ ನಡೆಸುತ್ತಿದ್ದಾರೆ.
ತಿರುವಣ್ಣಾಮಲೈನಲ್ಲಿರುವ ಸಚಿವರ ನಿವಾಸದ ಮೇಲೂ ತನಿಖಾ ಸಂಸ್ಥೆ ದಾಳಿ ನಡೆಸಿದೆ.ಆರಂಭಿಕ ವರದಿಗಳ ಪ್ರಕಾರ, ತಮಿಳುನಾಡಿನ 40 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗುತ್ತಿದೆ. ಇ.ವಿ.ವೇಲು ಅವರು ತಮಿಳುನಾಡು ಸರ್ಕಾರದಲ್ಲಿ ಲೋಕೋಪಯೋಗಿ ಸಚಿವರಾಗಿದ್ದಾರೆ. ಪಿಡಬ್ಲ್ಯೂಡಿ ಗುತ್ತಿಗೆದಾರರನ್ನು ಸಹ ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.