ಇರಾನ್ ವಿರುದ್ಧದ ಯುದ್ಧಕ್ಕೆ ಭಾರತದ ಬಂದರುಗಳ ಬಳಕೆ: ಅಮೆರಿಕ ಮಾಧ್ಯಮದ ವರದಿ ಬಗ್ಗೆ ಕೇಂದ್ರ ಸರ್ಕಾರ ಹೇಳಿದ್ದೇನು? - Mahanayaka

ಇರಾನ್ ವಿರುದ್ಧದ ಯುದ್ಧಕ್ಕೆ ಭಾರತದ ಬಂದರುಗಳ ಬಳಕೆ: ಅಮೆರಿಕ ಮಾಧ್ಯಮದ ವರದಿ ಬಗ್ಗೆ ಕೇಂದ್ರ ಸರ್ಕಾರ ಹೇಳಿದ್ದೇನು?

us in war on iran
05/03/2026

ನವದೆಹಲಿ: ಇರಾನ್ ವಿರುದ್ಧದ ಯುದ್ಧಕ್ಕಾಗಿ ಅಮೆರಿಕದ ನೌಕಾಪಡೆ ಭಾರತದ ಬಂದರುಗಳನ್ನು ಬಳಸಿಕೊಳ್ಳುತ್ತಿದೆ ಎಂಬ ವರದಿಗಳನ್ನು ಭಾರತ ಸರ್ಕಾರ ತೀವ್ರವಾಗಿ ಖಂಡಿಸಿದೆ. ಇವು “ಆಧಾರರಹಿತ ಮತ್ತು ಕಟ್ಟುಕಥೆ” ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಸ್ಪಷ್ಟಪಡಿಸಿದೆ.

ಅಮೆರಿಕ ಮೂಲದ ‘ಓಪನ್ ಅಮೆರಿಕಾ ನ್ಯೂಸ್’ (OAN) ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅಮೆರಿಕ ಸೇನೆಯ ಕರ್ನಲ್ ಡೌಗ್ಲಾಸ್ ಮ್ಯಾಕ್‌ ಗ್ರೆಗರ್, “ನಮ್ಮ ನೆಲೆಗಳು ಮತ್ತು ಬಂದರುಗಳು ನಾಶವಾಗುತ್ತಿವೆ. ಹೀಗಾಗಿ ನಾವು ಅನಿವಾರ್ಯವಾಗಿ ಭಾರತ ಮತ್ತು ಅದರ ನೌಕಾ ಬಂದರುಗಳ ಮೊರೆ ಹೋಗುತ್ತಿದ್ದೇವೆ” ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯನ್ನು ಕಟ್ಟುನಿಟ್ಟಾಗಿ ನಿರಾಕರಿಸಿರುವ ವಿದೇಶಾಂಗ ಸಚಿವಾಲಯದ ‘ಫ್ಯಾಕ್ಟ್ ಚೆಕ್’ (Fact Check) ವಿಭಾಗ,  ಅಮೆರಿಕದ ವಾಹಿನಿಯಲ್ಲಿ ಪ್ರಸಾರವಾದ ವರದಿ ಸಂಪೂರ್ಣವಾಗಿ ಸುಳ್ಳು ಮತ್ತು ನಕಲಿ.  ಭಾರತದ ಯಾವುದೇ ಬಂದರುಗಳನ್ನು ಅಮೆರಿಕದ ನೌಕಾಪಡೆ ಇರಾನ್ ಮೇಲಿನ ದಾಳಿಗೆ ಬಳಸುತ್ತಿಲ್ಲ.  ಇಂತಹ ದಾರಿ ತಪ್ಪಿಸುವ ಮತ್ತು ಆಧಾರರಹಿತ ವದಂತಿಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಸಚಿವಾಲಯ ತಿಳಿಸಿದೆ.

ಸಚಿವಾಲಯವು ಸದರಿ ಸಂದರ್ಶನದ ಸ್ಕ್ರೀನ್‌ ಶಾಟ್‌ ಗಳನ್ನು ಹಂಚಿಕೊಂಡು ಅವುಗಳ ಮೇಲೆ ‘ನಕಲಿ ಸುದ್ದಿ’ (FAKE) ಎಂಬ ಮುದ್ರೆಯನ್ನು ಒತ್ತಿ ಸಾಮಾಜಿಕ ಜಾಲತಾಣಗಳಲ್ಲಿ ಎಚ್ಚರಿಕೆ ನೀಡಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ