ಲಂಡನ್ ನಲ್ಲಿ ಚೂರಿಯಿಂದ ಇರಿದು ಭಾರತೀಯ ವಿದ್ಯಾರ್ಥಿನಿಯ ಹತ್ಯೆ - Mahanayaka

ಲಂಡನ್ ನಲ್ಲಿ ಚೂರಿಯಿಂದ ಇರಿದು ಭಾರತೀಯ ವಿದ್ಯಾರ್ಥಿನಿಯ ಹತ್ಯೆ

thejasvini
14/06/2023


Provided by

ಹೈದರಾಬಾದ್‌ ಮೂಲದ 27 ವರ್ಷದ ವಿದ್ಯಾರ್ಥಿನಿಯನ್ನು ಚೂರಿಯಿಂದ ಇರಿದು ಹತ್ಯೆ ಮಾಡಿದ ಘಟನೆ ಲಂಡನ್‌ ನಗರದ ವೆಂಬ್ಲೆ ಪ್ರದೇಶದ ನೀಲ್ಡ್‌ ಕ್ರೆಸೆಂಟ್‌ ಪ್ರದೇಶದಲ್ಲಿ ನಡೆದಿದೆ.

ಮೃತ ಯುವತಿಯನ್ನು ತೇಜಸ್ವಿನಿ ರೆಡ್ಡಿ (27) ಎಂದು ಗುರುತಿಸಲಾಗಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಲಂಡನ್‌ನಲ್ಲಿದ್ದಳು. ಮನೆಯಲ್ಲಿದ್ದ ಈಕೆಯನ್ನು ಬ್ರೆಝಿಲ್‌ ಮೂಲದ ವ್ಯಕ್ತಿಯೊಬ್ಬ ಹತ್ಯೆಗೈದಿದ್ದಾನೆ.

ಈ ದಾಳಿಯಲ್ಲಿ ತೇಜಸ್ವಿನಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾಳೆ. ಇದೇ ವೇಳೆ ಗಾಯಗೊಂಡ ಇನ್ನೋರ್ವ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷದ ಯುವಕ ಹಾಗೂ 23 ವರ್ಷದ ಯುವತಿಯೊಬ್ಬಳನ್ನು ಪೊಲೀಸರು ವಶಕ್ಕೆ ಪಡೆದುಕೊಳ್ಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ