ದೇಶದ ದೊಡ್ಡ ಆಸ್ತಿ ಪಾಕಿಸ್ತಾನದಲ್ಲಿದೆಯಂತೆ: ಪಾಕಿಸ್ತಾನಿಯರು ಭಾರತವನ್ನು ಶತ್ರುಗಳಂತೆ ನೋಡಲ್ಲ ಎಂದ ಮಣಿಶಂಕರ್ ಅಯ್ಯರ್ - Mahanayaka

ದೇಶದ ದೊಡ್ಡ ಆಸ್ತಿ ಪಾಕಿಸ್ತಾನದಲ್ಲಿದೆಯಂತೆ: ಪಾಕಿಸ್ತಾನಿಯರು ಭಾರತವನ್ನು ಶತ್ರುಗಳಂತೆ ನೋಡಲ್ಲ ಎಂದ ಮಣಿಶಂಕರ್ ಅಯ್ಯರ್

22/08/2023

ಭಾರತದ ಅತೀ ದೊಡ್ಡ ಆಸ್ತಿ ಪಾಕಿಸ್ತಾನದಲ್ಲಿದೆ. ಭಾರತೀಯರನ್ನು ಶತ್ರುಗಳಂತೆ ನೋಡದ ಪಾಕಿಸ್ತಾನಿಯರು ಭಾರತದ ಪಾಲಿಗೆ ಅತೀ ದೊಡ್ಡ ಆಸ್ತಿ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಣಿಶಂಕರ್ ಅಯ್ಯರ್ ಹೇಳಿದ್ದಾರೆ.

ಡಿಸೆಂಬರ್ 1978 ರಿಂದ ಜನವರಿ 1982ರವರೆಗೆ ಕರಾಚಿಯಲ್ಲಿ ಭಾರತದ ರಾಯಭಾರ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಮಣಿಶಂಕರ್ ಅಯ್ಯರ್ ಅವರ ಆತ್ಮಚರಿತ್ರೆ ʼMemoirs of a Maverick, The First Fifty Years (1941-1991) ಬಿಡುಗಡೆಯಾಗಿದ್ದು, ಈ ಕೃತಿಯಲ್ಲಿ ಪಾಕಿಸ್ತಾನದಲ್ಲಿದ್ದಾಗಿನ ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.

ತಾನು ಯಾವತ್ತೂ ಪಾಕಿಸ್ತಾನವನ್ನು ಶತ್ರುರಾಷ್ಟ್ರ ಎಂದು ಪರಿಗಣಿಸಿಲ್ಲ ಎಂದ ಅವರು, ಒಂದು ದಿನ ನನ್ನ ಪತ್ನಿ ಸುನೀತ್ ಇದು ನಮ್ಮ ಶತ್ರು ರಾಷ್ಟ್ರ ಅಲ್ಲವೇ..? ಎಂದು ಪ್ರಶ್ನಿಸಿದ್ದಳು. ಆ ಪ್ರಶ್ನೆಗೆ ನನ್ನ ಬಳಿ ಉತ್ತರ ಇರಲಿಲ್ಲ ಎಂದು ಅವರು ಹೇಳಿದ್ದಾರೆ.

ಅಲ್ಲಿದ್ದ ಮೂರು ವರ್ಷ ಮತ್ತು ಆ ವೃತ್ತಿ ತೊರೆದ 40 ವರ್ಷಗಳಾದರೂ ಆ ಪ್ರಶ್ನೆ ನನ್ನನ್ನು ಕಾಡುತ್ತಲೇ ಇದೆ. ಸೇನೆ ಹಾಗೂ ರಾಜಕಾರಣಿಗಳ ಲೆಕ್ಕಾಚಾರಗಳು ಏನೇ ಇರಲಿ. ಪಾಕಿಸ್ತಾನವನ್ನು ಶತ್ರು ರಾಷ್ಟ್ರ ಎಂದು ನಾನು ಯಾವತ್ತೂ ಪರಿಗಣಿಸಿಲ್ಲ ಎಂದು ಹೇಳಿದ್ದಾರೆ.

ಪಾಕಿಸ್ತಾನದ ಜೊತೆಗಿನ ಸಮಸ್ಯೆ ಬಗೆಹರಿಯದೇ ಭಾರತ ವಿಶ್ವ ಗುರುವಾಗಲು ಸಾಧ್ಯವಿಲ್ಲ ಎಂದು ಅವರು, ಅಲ್ಲಿನ ನಾಗರಿಕರು ಯಾವತ್ತೂ ನಮ್ಮನ್ನು ಶತ್ರುಗಳಂತೆ ನೋಡುವುದಿಲ್ಲ. ಪಾಕಿಸ್ತಾನ ನಮಗೆ ಒಂದು ರೀತಿಯ ಹೊರೆಯಾಗಿರುವಾಗ ನಾವು ಜಾಗತಿಕವಾಗಿ ಮೇಲೇರಲು ಸಾಧ್ಯವಿಲ್ಲ. ನಮ್ಮ ನೆರೆಯ ರಾಷ್ಟ್ರದೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ಗೊತ್ತಿಲ್ಲದಿರುವಾಗ ನಾವು ವಿಶ್ವಗುರು ಎಂದು ಕರೆದುಕೊಳ್ಳುವುದು ಹಾಸ್ಯಾಸ್ಪದ ಎಂದು ಅಯ್ಯರ್ ಹೇಳಿದ್ದಾರೆ.

ಇತ್ತೀಚಿನ ಸುದ್ದಿ