ಕಳೆದೆರಡು ವರ್ಷಗಳಲ್ಲಿ 1,50,000ದಷ್ಟು ಮನೆಗಳು ನೆಲಸಮ: ಮುಸ್ಲಿಮರು ಮತ್ತು ಇತರ ಹಿಂದುಳಿದ ಸಮುದಾಯದವ್ರೇ ಸಂತ್ರಸ್ತರು

ಕಳೆದೆರಡು ವರ್ಷಗಳಲ್ಲಿ 1,50,000ದಷ್ಟು ಮನೆಗಳು ಮತ್ತು ಇತರ ಕಟ್ಟಡಗಳನ್ನು ನೆಲಸಮಗೊಳಿಸಲಾಗಿದೆ. 7,38,000 ಜನರು ಬೀದಿ ಪಾಲಾಗಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಅತ್ಯಂತ ಹೆಚ್ಚು ಸಂತ್ರಸ್ತರಾದವರು ಮುಸ್ಲಿಮರು ಮತ್ತು ಇತರ ಹಿಂದುಳಿದ ಸಮುದಾಯವಾಗಿದ್ದಾರೆ. ಅಕ್ರಮ ಒತ್ತುವರಿಯನ್ನು ತೆರವುಗೊಳಿಸುವುದು ಮತ್ತು ಅಭಿವೃದ್ಧಿಯ ಹೆಸರಲ್ಲಿ ಈ ಎಲ್ಲ ನೆಲಸಮ ಕಾರ್ಯಾಚರಣೆ ನಡೆದಿದೆ ಎಂದು ಫ್ರೆಂಟ್ ಲೈನ್ ಪತ್ರಿಕೆಯಲ್ಲಿ ಅಂಜು ಬೆಹಲ್ ಬರೆದಿದ್ದಾರೆ.
ಈ ವರದಿಯು ಜೂನ್ 19ರಂದು ಅಕ್ಬರ್ ನಗರದಲ್ಲಿ ನಡೆದ ನೆಲಸಮ ಕಾರ್ಯಾಚರಣೆಯನ್ನು ಮುಖ್ಯವಾಗಿ ಎತ್ತಿ ಹೇಳಿದೆ. ಇಲ್ಲಿ 1969 ಮನೆಗಳು ಮತ್ತು ನೂರಾ ಒಂದು ವಾಣಿಜ್ಯ ಕಟ್ಟಡಗಳು ಸೇರಿ 1800 ಕಟ್ಟಡಗಳನ್ನು ಉರುಳಿಸಲಾಗಿದೆ. ಅಭಿವೃದ್ಧಿಯ ಹೆಸರಲ್ಲಿ ಈ ನೆಲಸಮ ಕಾರ್ಯಾಚರಣೆ ನಡೆದಿದೆ. ಆದರೆ ಇಲ್ಲಿಯ ಜನರು ದಶಕಗಳಿಂದ ಈ ಜಾಗದಲ್ಲಿ ನೆಲೆಸಿದ್ದರು. ಬಂದರು ನಿಲ್ದಾಣ ತಯಾರಿಸುವ ಹೆಸರಲ್ಲಿ ಸರಕಾರ ಈ ನೆಲಸಮ ಕಾರ್ಯಾಚರಣೆ ನಡೆಸಿದೆ.
ಆದರೆ ಅಧಿಕಾರಿಗಳು ಈ ನೆಲಸಮ ಕಾರ್ಯಾಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ಅಕ್ರಮವಾಗಿ ಈ ಜಾಗವನ್ನು ಜನರು ವಶಪಡಿಸಿಕೊಂಡು ತಮ್ಮ ಮನೆಗಳನ್ನು ಕಟ್ಟಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಹಾಗಂತ ಈ ನೆಲಸಮ ಕಾರ್ಯಾಚರಣೆ ಕೇವಲ ಉತ್ತರ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಮಹಾರಾಷ್ಟ್ರ ಮಧ್ಯಪ್ರದೇಶದಲ್ಲೂ ಇಂತಹ ನೆಲಸಮ ಕಾರ್ಯಾಚರಣೆಗಳು ನಡೆದಿವೆ. ಮಧ್ಯಪ್ರದೇಶದ ಮಂಡ್ಲಾ ಜಿಲ್ಲೆಯಲ್ಲಿ ಜೂನ್ 15 ರಂದು ಮುಸ್ಲಿಮರ 11 ಮನೆಗಳನ್ನು ನೆಲಸಮ ಮಾಡಲಾಗಿದೆ. ಮುಂಬೈಯ ಪವಾಯಿ ಪ್ರದೇಶದಲ್ಲಿ ದಲಿತ್ ಬಸ್ತಿಯ 600 ರಷ್ಟು ಕಟ್ಟಡಗಳನ್ನು ನೆಲಸಮಗೊಳಿಸಲಾಗಿದ್ದು 3500 ಮಂದಿ ಬೀದಿ ಪಾಲಾಗಿದ್ದಾರೆ. ಈ ಬಗ್ಗೆ ವಿಸ್ತೃತ ವಿವರ ಫ್ರಂಟ್ ಲೈನ್ ಪತ್ರಿಕೆಯಲ್ಲಿ ಇದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth