ಇನ್ಸ್ಟಾಗ್ರಾಮ್ ಬಳಸದಂತೆ ಆದೇಶ : ರಷ್ಯಾ ಸರ್ಕಾರ - Mahanayaka

ಇನ್ಸ್ಟಾಗ್ರಾಮ್ ಬಳಸದಂತೆ ಆದೇಶ : ರಷ್ಯಾ ಸರ್ಕಾರ

instagram
15/03/2022

ರಷ್ಯಾ: ರಷ್ಯಾವು ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿ ರಷ್ಯಾದ ಸಾಮಾಜಿಕ ಮಾಧ್ಯಮ ಬಳಕೆದಾರರ ಮೇಲೂ ಪರಿಣಾಮ ಬೀಳುತ್ತಿದ್ದು, ರಷ್ಯಾನ್ನರು ಇನ್ಮುಂದೆ ಇನ್ಸ್ಟಾಗ್ರಾಮ್ ಬಳಸದಂತೆ ರಷ್ಯಾ ಸರ್ಕಾರ ಆದೇಶ ಹೊರಡಿಸಿರುವ ಬಗ್ಗೆ ವರದಿಯಾಗಿದೆ.


Provided by

ವಿಶ್ವದ ಬೇರೆ ಬೇರೆ ಸಾಮಾಜಿಕ ಮಾಧ್ಯಮ ವೇದಿಕೆಗಳು ಯುದ್ಧದ ಸಮಯದಲ್ಲಿ ರಷ್ಯಾದಿಂದ ಅವುಗಳ ಬಳಕೆಯನ್ನು ತಡೆಯಲು ವಿವಿಧ ತಾಂತ್ರಿಕ ನಿಬಂಧನೆಗಳನ್ನು ಮಾಡಿದ್ದು, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆ ಜಾಹೀರಾತನ್ನು ಟ್ವಿಟರ್ ನಿಷೇಧಿಸಿದ್ದರೆ, ರಷ್ಯಾದ ರಾಜ್ಯ ಮಾಧ್ಯಮದ ಯೂಟ್ಯೂಬ್ ಚಾನೆಲ್‌ನ ಜಾಹೀರಾತನ್ನು ಗೂಗಲ್ ತೆಗೆದುಹಾಕಿದೆ.

ಫೇಸ್ ಬುಕ್ ಆ್ಯಪ್‌ನ್ನು ರಷ್ಯಾ ಈಗಾಗಲೇ ನಿಷೇಧಿಸಿದ್ದು, ಇದೀಗ ಮೆಟಾ ಒಡೆತನದ ಎರಡನೇ ಅಪ್ಲಿಕೇಶನ್ ಇನ್ಸ್ಟಾಗ್ರಾಮ್ ಅನ್ನು ರಷ್ಯಾದಲ್ಲಿ ನಿಷೇಧಿಸಲಾಗಿದೆ.

ಅಲ್ಲದೆ, ಫೇಸ್ ಬುಕ್ ಮತ್ತು ಇನ್ ಸ್ಟಾಗ್ರಾಮ್ ಹೊರತುಪಡಿಸಿ, ಟಿಕ್ ಟಾಕ್ ಅನ್ನು ರಷ್ಯಾದಲ್ಲಿ ಭಾಗಶಃ ನಿಷೇಧಿಸಲಾಗಿದ್ದು, ಈಗಾಗಲೇ ಅಪ್ ಲೋಡ್ ಮಾಡಲಾದ ವೀಡಿಯೊವನ್ನು ವೀಕ್ಷಿಸಬಹುದು ಆದರೆ ಹೊಸ ವೀಡಿಯೊವನ್ನು ಅಪ್ ಲೋಡ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು’

ಹಿಜಾಬ್ ವಿಚಾರ: ಹೈಕೋರ್ಟ್ ತೀರ್ಪಿಗೆ ಎಲ್ಲರೂ ತಲೆಬಾಗಬೇಕು; ಸಿಎಂ ಬಸವರಾಜ ಬೊಮ್ಮಾಯಿ

ನಮ್ಮ ಪ್ರಾಂಶುಪಾಲರು ಪ್ರತಿದಿನ ಕುರಾನ್, ಬೈಬಲ್, ಭಗವದ್ಗೀತೆ ಓದಿಸುತ್ತಿದ್ದರು: ಮುಸ್ಕಾನ್

ವಿಪರೀತ ಶಾಖದಲ್ಲಿ ದೇಹವನ್ನು ತಂಪಾಗಿಸಲು ಏನು ಕುಡಿಯಬೇಕು?  ಏನು ತಪ್ಪಿಸಬೇಕು?

ಹಿಜಾಬ್ ವಿವಾದ: ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದ ಹೈಕೋರ್ಟ್

ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳಿಂದ ಮಹಿಳೆಯ ಮಂಗಲ್ಯ ಸರ ಅಪಹರಣ

 

ಇತ್ತೀಚಿನ ಸುದ್ದಿ