ಹೆಚ್ಚಾದ ಕೋವಿಶೀಲ್ಡ್ ಲಸಿಕೆ ಭೀತಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಸೂಚನಾ ಪತ್ರ!

ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮವನ್ನು ಬೀರಬಹುದು ಎಂದು ಬ್ರಿಟಿಷ್ ಫಾರ್ಮಾ ಸಂಸ್ಥೆ ಅಸ್ಟ್ರಾಜೆನೆಕಾ ಹೇಳಿದ ನಂತರ ಜನರಲ್ಲಿ ಭೀತಿ ಮೂಡಿದ್ದು, ವಿವಿಧೆಡೆಗಳಲ್ಲಿ ಹಲವಾರು ಚರ್ಚೆಗಳು ಆರಂಭವಾಗಿದೆ. ಈ ನಡುವೆ ಶಿಕ್ಷಣ ಸಂಸ್ಥೆಯೊಂದರ ಹೆಸರಿನಲ್ಲಿ ಹೊರಡಿಸಲಾಗಿರುವ ಸೂಚನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿಕ್ಕಬಳ್ಳಾಪುರದಲ್ಲಿರುವ ಸಿದ್ದರಾಮಯ್ಯ ಕಾನೂನು ಕಾಲೇಜಿನ ಪ್ರಾಂಶುಪಾಲರು, ತಮ್ಮ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಕೆಲವೊಂದು ಎಚ್ಚರಿಕೆ ಮತ್ತು ಕೆಲವೊಂದು ಅಂಶಗಳನ್ನು ಪಾಲಿಸಬೇಕೆಂದು ಸೂಚನೆ ಹೊರಡಿಸಿದಂತಹ ಪತ್ರವೊಂದು ವೈರಲ್ ಆಗಿದೆ.
ಈ ಪತ್ರದಲ್ಲಿ ಆರೋಗ್ಯ ಇಲಾಖೆ ತಿಳಿಸಿರುವ ಮಾಹಿತಿಯ ಪ್ರಕಾರ, ಎಲ್ಲಾ ವಿದ್ಯಾರ್ಥಿಗಳು ಮತ್ತು ಪೋಷಕರು ಯಾವುದೇ ರೀತಿಯ ಫ್ರಿಡ್ಜ್ ನೀರು, ಐಸ್ ಕ್ರೀಮ್, ಮತ್ತು ತಂಪು ಪಾನೀಯಗಳನ್ನು ಕುಡಿಯಬಾರದು ಎಂದು ಮೇ 2ನೇ ತಾರೀಕು ಹೊರಡಿಸಲಾದ ಪ್ರಕಟಣೆಯಲ್ಲಿ ತಿಳಿಸಿದೆ.
ಕೋವಿಡ್ ಸಮಯದಲ್ಲಿ ಕೋವಿಡ್ ಶೀಲ್ಡ್ ಹಾಕಿಸಿಕೊಂಡಿರುವ ಪರಿಣಾಮ ರಕ್ತ ಹೆಪ್ಪುಗಟ್ಟುವುದು, ದಿಢೀರ್ ಹೃದಯಾಘಾತ ಸಂಭವಿಸಿ ಪ್ರಾಣಹಾನಿಯಾಗುತ್ತದೆ. ಹಾಗಾಗಿ, ಮೇಲೆ ತಿಳಿಸಿರುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸುವುದು. ಹಾಗೂ ತಮ್ಮ ಪೋಷಕರಿಗೆ ಮತ್ತು ಇತರರಿಗೆ ಪಾಲಿಸಲು ಹೇಳುವುದು.
ಇನ್ನು, ಎರಡು ತಿಂಗಳು ಬೇಸಿಗೆ ಹೆಚ್ಚಾಗುತ್ತಿರುವ ಕಾರಣದಿಂದ ಬಿಸಿಲು ಹೆಚ್ಚಾಗಿ ( Sun Stroke) ಸೂರ್ಯಾಘಾತ ಒಡೆಯುತ್ತಿದೆ. ಆದುದರಿಂದ, ಎಲ್ಲರೂ ತಲೆಯ ಮೇಲೆ ಟೋಪಿ, ಬಟ್ಟೆ ಅಥವಾ ಛತ್ರಿ ಹಿಡಿದು ಓಡಾಡಬೇಕೆಂದು ಸೂಚಿಸಲಾಗಿದೆ.
ಈ ವಿಷಯವನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಪಾಲಿಸುತ್ತಾ ತಮ್ಮ ಪೋಷಕರಿಗೆ ಮತ್ತು ಇತರರಿಗೆ ತಿಳಿಸಬೇಕೆಂದು ಕೋರಲಾಗಿದೆ’ ಎಂದು ಪ್ರಾಂಶುಪಾಲರು ಸಹಿಹಾಕಿರುವ ಪ್ರಕಟಣೆ ಸಾಕಷ್ಟು ವೈರಲ್ ಆಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth